Advertisement
ಜೆಎನ್.1 ಉಪ ರೂಪಾಂತರಿ ಪತ್ತೆಯ ಬಳಿಕವೂ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆಯೇ ಇದ್ದು, ಪರಿಸ್ಥಿತಿ ತೀರಾ ಕಳವಳಕಾರಿಯಾಗಿಲ್ಲ ಈ ಹಿನ್ನೆಲೆಯಲ್ಲಿ ಅಂಥ ಯಾವುದೇ ಕ್ರಮಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಪ್ರಸ್ತಾವಿಸಲಾಗಿಲ್ಲ ಎಂದಿದೆ. ಇನ್ನು ಗುರುವಾರ ದೇಶಾದ್ಯಂತ ಹೊಸದಾಗಿ 594 ಮಂದಿಗೆ ಕೊರೊನಾ ದೃಢಪಟ್ಟು, 6 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಕೇರಳದಿಂದಲೇ 300 ಪ್ರಕರಣ ದಾಖಲಾಗಿದೆ ಹಾಗೂ ಮೂವರು ಮೃತಪಟ್ಟಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಚಂಡೀಗಢ ಆಡಳಿತ ಆದೇಶಿಸಿದೆ. ಉಪ ತಳಿ ಜೆಎನ್.1 ತೀವ್ರಗತಿಯಲ್ಲಿ ಹರಡುತ್ತಿದೆ. ಮುನ್ನೆ ಚ್ಚರಿಕೆ ಕ್ರಮವಾಗಿ ಚಂಡೀಗಢ ಆಡಳಿತ ಮಾರ್ಗಸೂಚಿ ಹೊರಡಿಸಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಕೆಮ್ಮುವಾಗ ಮತ್ತು ಸೀನುವಾಗ ಬಟ್ಟೆ ಅಥವಾ ಟಿಶ್ಯು ಪೇಪರ್ ಅನ್ನು ಅಡ್ಡ ಹಿಡಿಯಿರಿ. ಗುಣಲಕ್ಷಣಗಳು ಕಂಡುಬಂದರೆ ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿದೆ.