Advertisement

ವಿಮಾನ ನಿಲ್ದಾಣ ಹೆಸರಲ್ಲಿ ಇನ್ನು “ಮಂಗಳೂರು’ಅಧಿಕೃತ

12:11 AM Nov 04, 2022 | Team Udayavani |

ಮಂಗಳೂರು: ದಾಖಲೆಗಳಲ್ಲಿ “ಮ್ಯಾಂಗಲೋರ್‌’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿರುವ ಹೆಸರನ್ನು “ಮಂಗಳೂರು’ ಎಂದು ಬದಲಾವಣೆ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರ ಆದೇಶಿಸಿದೆ.

Advertisement

ವಿಮಾನ ನಿಲ್ದಾಣದಲ್ಲಿರುವ ಬೋರ್ಡ್‌ ಸಹಿತ ಸ್ವಾಗತ ಕಮಾನುಗಳಲ್ಲಿ ಈಗಾಗಲೇ “ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಬರೆಯಲಾಗಿದೆ. ಆದರೆ ಪ್ರಾಧಿಕಾರದ ದಾಖಲೆಗಳಲ್ಲಿ ಮಾತ್ರ “ಮ್ಯಾಂಗಲೋರ್‌’ ಎಂದೇ ಉಲ್ಲೇಖ ಬಾಕಿಯಾಗಿತ್ತು. ಮಂಗಳೂರು ನಗರದಲ್ಲಿಯೂ “ಮಂಗಳೂರು’ ಪದ ಬಳಕೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಗೂ ದೇಶ-ವಿದೇಶದ ಪಾಲುದಾರರ ನಡುವಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ. ಡಿ. 1ರಿಂದ ಇದು ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next