Advertisement

ಏರ್‌ ಏಶ್ಯ ಸಿಇಓ ಟೋನಿ ಫೆರ್ನಾಂಡಿಸ್‌ ಮತ್ತಿತರರ ವಿರುದ್ಧ ಸಿಬಿಐ ಕೇಸ್

04:11 PM May 29, 2018 | Team Udayavani |

ಹೊಸದಿಲ್ಲಿ : ಅಂತಾರಾಷ್ಟ್ರೀಯ ವಿಮಾನ ಹಾರಾಟ ಪರವಾನಿಗೆಗಳನ್ನು ಪಡೆಯುವಲ್ಲಿನ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಏರ್‌ಏಶ್ಯ ಸಿಇಓ ಟೋನಿ ಫೆರ್ನಾಂಡಿಸ್‌ ಮತ್ತು ಇತರರ ವಿರುದ್ಧ ಕೇಸು ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಇಂದು ಮಂಗಳವಾರ ತಿಳಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನು ನಿರ್ವಹಿಸುವುದಕ್ಕಾಗಿ ಮತ್ತು ವಾಯುಯಾನ ರಂಗದ 5/20 ನಿಯಮ ಮತ್ತು  ವಿದೇಶಿ ಹೂಡಿಕೆ ಪ್ರೋತ್ಸಾಹನ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಕ್ಕಾಗಿ ಸಿಬಿಐ, ಟೋನಿ ಫೆರ್ನಾಂಡಿಸ್‌ ಮತ್ತು ಇತರರ ವಿರುದ್ಧ ಕೇಸು ದಾಖಲಿಸಿಕೊಂಡಿದೆ.  

5/20ರ ನಿಮಯವೆಂದರೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಲೈಸನ್ಸ್‌ ಪಡೆಯ ಬಯಸುವ ಕಂಪೆನಿಯು ಐದು ವರ್ಷದ ಅನುಭವ ಹೊಂದಿರಬೇಕು ಮತ್ತು ಕನಿಷ್ಠ  20 ವಿಮಾನಗಳನ್ನು ಹೊಂದಿರಬೇಕು ಎಂಬುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next