Advertisement

ಜುಲೈ 1ರಿಂದ ವಿಮಾನ ಪ್ರಯಾಣ ತುಟ್ಟಿ: ಎಎಸ್‌ಎಫ್ ಶುಲ್ಕ ಏರಿಕೆ

10:06 AM Jun 09, 2019 | Team Udayavani |

ಹೊಸದಿಲ್ಲಿ : ನಾಗರಿಕ ವಾಯು ಯಾನ ಸಚಿವಾಲಯ ಜು.1ರಿಂದ ಅನ್ವಯವಾಗುವಂತೆ  ಪ್ರಯಾಣಿಕರ ತಲಾ ವಿಮಾನ ಯಾನ ಭದ್ರತಾ ಶುಲ್ಕವನ್ನು (ಎಎಸ್‌ಎಫ್) ಈಗಿನ 130 ರೂ.ಗಳಿಂದ 150 ರೂ.ಗೆ ಏರಿಸಲು ನಿರ್ಧರಿಸಿದೆ. ಆದ ಕಾರಣ ವಿಮಾನ ಯಾನ ಈಗಿನ್ನು ಸ್ವಲ್ಪಮಟ್ಟಿಗೆ ತುಟ್ಟಿಯಾಗಲಿದೆ ಎಂದು ಅಧಿಕೃತ ದಾಖಲೆ ಪತ್ರಗಳು ತಿಳಿಸಿವೆ.

Advertisement

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಎಎಸ್‌ಎಫ್ ಶುಲ್ಕವನ್ನು ಈಗಿನ 3.25 ಡಾಲರ್‌ ನಿಂದ 4.85 ಡಾಲರ್‌ಗೆ ಮುಂದಿನ ತಿಂಗಳಿಂದ ಏರಿಸಲಾಗುವುದೆಂದು ದಾಖಲೆಪತ್ರಗಳು ಹೇಳಿವೆ.

ಭದ್ರತಾ ಅಂಶವೂ ಒಳಗೊಂಡಂತೆ ಈಗ ಚಾಲ್ತಿಯಲ್ಲಿರುವ ಪ್ರಯಾಣಿಕ ಸೇವಾ ಶುಲ್ಕ (ಪಿಎಸ್‌ಎಫ್)ಈಗಿನ್ನು ಎಎಸ್‌ಎಫ್ ಆಗಿ ಬದಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next