Advertisement

ಮಧ್ಯರಾತ್ರಿಯಿಂದಲೇ ಎಸಿ, ಫ್ರಿಜ್‌ ದರ ಹೆಚ್ಚಳ

06:00 AM Sep 27, 2018 | |

ಹೊಸದಿಲ್ಲಿ: ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಕೇಂದ್ರ ಸರಕಾರ ಏರ್‌ ಕಂಡೀಶನರ್‌, ರೆಫ್ರಿಜರೇಟರ್‌ ಸಹಿತ 19 ಸಾಮಗ್ರಿ ಗಳ ಆಮದು ಸುಂಕವನ್ನು ಏರಿಸಿದೆ. ಇದರಿಂದಾಗಿ ವಿದೇಶದಿಂದ ಆಮದಾಗುವ ಈ ಎಲ್ಲ  ವಸ್ತುಗಳ ದರ ಏರಿಕೆಯಾಗಲಿದೆ.

Advertisement

ಬುಧವಾರ ಮಧ್ಯರಾತ್ರಿಯಿಂದಲೇ ಈ ದರ ಜಾರಿಯಾಗಲಿದ್ದು ವಿಮಾನ ಪ್ರಯಾಣ, ಚಪ್ಪಲಿ,  ವಾಷಿಂಗ್‌ ಮೆಶಿನ್‌ಗಳು, ಸ್ಪೀಕರುಗಳು, ರೇಡಿಯಲ್‌ ಕಾರ್‌ ಟೈರ್‌ಗಳು, ಆಭರಣ, ಅಡುಗೆ ಮನೆ ಸಾಮಗ್ರಿಗಳು, ಕೆಲವು ಪ್ಲಾಸ್ಟಿಕ್‌ ಸಾಮಗ್ರಿಗಳು ಮತ್ತು ಸೂಟ್‌ಕೇಸ್‌ಗಳು ದುಬಾರಿಯಾಗಲಿವೆ. ಕಳೆದ ವಿತ್ತ ವರ್ಷದಲ್ಲಿ ಈ ಸಾಮಗ್ರಿಗಳನ್ನು 86 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು.

ಎಸಿಗಳು, ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್‌ ಮೆಶಿನ್‌ಗಳ ಆಮದು ಸುಂಕ ದ್ವಿಗುಣಗೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next