Advertisement
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ನ್ನು ಉದ್ಘಾಟಿಸಿ ಮಾತನಾಡಿದರು
ಭಾರತದ ಎಂಜನೀಯರಗಳ ಸಾಮರ್ಥ್ಯ ಉತ್ತಮ ವಾಗಿದೆ.ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳನ್ನೂ ಒಳಗೊಂಡ ಸಂಪೂರ್ಣ ವಿಮಾನದ ಉತ್ಪಾದನೆಯನ್ನು ಬೆಂಗಳೂರಿನಲ್ಲಿಯೇ ಆಗಬೇಕೆಂಬುದು ನನ್ನ ಕನಸಾಗಿದೆ. ಏರೊಸ್ಪೇಸ್ ಕ್ಷೇತ್ರಕ್ಕೆ ಬೆಂಗಳೂರು ಉತ್ತಮ ಸ್ಥಳವಾಗಿದ್ದು, ಇಲ್ಲಿ ಡಿಆರ್ ಡಿ ಒ, ಎನ್ ಎ ಎಲ್, ಎಚ್ ಎ ಎಲ್ ನಂತಹ ಸಂಸ್ಥೆಗಳಿವೆ.ಬೆಂಗಳೂರಿನಲ್ಲಿ ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಸೆಮಿ ಕಂಡಕ್ಟರ್ ಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ ಎಂದರು.
Related Articles
ಕೊಲಿನ್ಸ್ ಏರೊಸ್ಪೆಸ್ ಎಂಜನೀಯರಿಂಗ್ ಸಂಸ್ಥೆಯನ್ನು ಆರಂಭಿಸಿದ್ದು ಸಂತಸವಾಗಿದೆ. ಈ ಸಂಸ್ಥೆ ಬೆಂಗಳೂರಿನಲ್ಲಿ 25 ವರ್ಷ ಪೂರೈಸಿದೆ. ಇದು ಸಂಸ್ಥೆಯ ಸಾಧನೆಯನ್ನು ತೋರಿಸುತ್ತದೆ. ಈ ಸಂಸ್ಥೆ ಬೆಂಗಳೂರಿನ ಪ್ರಮುಖ ಇಂಜಿನಿಯರಿಂಗ್ ಕೇಂದ್ರವಾಗಿದೆ ಇದು ನಿಮ್ಮ ಶ್ರಮದ ಫಲ. ಬೆಂಗಳೂರು, ಕರ್ನಾಟಕ, ಭಾರತ ಹೆಮ್ಮೆ ಪಡುವಂತೆ ಸಂಸ್ಥೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
Advertisement
ಏರೋ ಸ್ಪೇಸ್ ಅತ್ಯಂತ ವಿಶೇಷ ಇದು ಮನುಷ್ಯನನ್ನು ಮತ್ತೊಂದು ಲೋಕಕ್ಕೆ ತೆಗೆದುಕೊಂಡು ಹೋಗುತ್ತದೆ. ಮನುಷ್ಯನ ಮನಸ್ಸನ್ನು ಒಂದು ಹಂತದವರೆಗೆ ವಿಸ್ತರಣೆ ಮಾಡಬಹುದು. ಮನುಷ್ಯನ ಬುದ್ದಿ ಶಕ್ತಿ ಶೇ 80 ರಷ್ಟು ಬಳಕೆಯಾಗುವುದಿಲ್ಲ. ಪರಮಹಂಸ ಅತ್ಯಂತ ಭಾರವಾದ ಮತ್ತು ಶುಭ್ರ ಪಕ್ಷಿ ಅದು ಅತಿ ಎತ್ತರದಲ್ಲಿ ಹಾರಬಹುದು. ಅದು ಮಾನಸ ಸರೋವರದಲ್ಲಿ ಇರುತ್ತದೆ. ಅದೇ ರೀತಿ ಏರೊಸ್ಪೇಸ್ ಅತ್ಯಂತ ಎತ್ತರದಲ್ಲಿ ಹಾರಬಹುದು.
ಈ ಸಂದರ್ಭದಲ್ಲಿ ಕಾಲಿನ್ಸ್ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಟಿಮ್ಸ್ , ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಮತ್ತಿತರರು ಉಪಸ್ಥಿತರಿದ್ದರು.