Advertisement

Air pollution: ವಾಯುಮಾಲಿನ್ಯದಿಂದ ತಗ್ಗಿದೆ ಜೀವಿತಾವಧಿ

12:49 AM Aug 30, 2023 | Team Udayavani |

ಹೊಸದಿಲ್ಲಿ: ವಾಯುಮಾಲಿನ್ಯವು ಮಾನವನ ಜೀವಿತಾವಧಿಯನ್ನು ಕಡಿಮೆ ಗೊಳಿಸುತ್ತಿದೆ. ವಾಯುಮಾಲಿನ್ಯದಿಂದಾಗಿ ಭಾರತ ಸೇರಿದಂತೆ ಆರು ರಾಷ್ಟ್ರಗಳಲ್ಲಿ ಮಾನವನ ಜೀವಿತಾವಧಿಯು ಒಂದರಿಂದ ಆರು ವರ್ಷಗಳಷ್ಟು ತಗ್ಗಿದೆ ಎಂದು ವರದಿಯೊಂದು ತಿಳಿಸಿದೆ.

Advertisement

ಅಮೆರಿಕದ ಚಿಕಾಗೊ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಇನ್ಸಿಸ್ಟಿಟ್ಯೂಟ್‌(ಇಪಿಐಸಿ) ತನ್ನ ವಾರ್ಷಿಕ ಏರ್‌ ಕ್ವಾಲಿಟಿ ಲೈಫ್ ಇಂಡೆಕ್ಸ್‌(ಎಕ್ಯೂಎಲ್‌ಐ) ವರದಿಯನ್ನು ಬಿಡುಗಡೆಗೊಳಿಸಿದೆ. ಈ ಅಧ್ಯಯನದ ಪ್ರಕಾರ, ಗುಣಮಟ್ಟದ ಗಾಳಿಯನ್ನು ಸೇವಿಸಿದರೆ, ಮಾನವನ ಸರಾಸರಿ ಜೀವಿತಾವಧಿಯು 2.3 ವರ್ಷಗಳಷ್ಟು ಏರಿಕೆಯಾಗಲಿದೆ. “ಪ್ರಮುಖವಾಗಿ ಭಾರತ, ಬಾಂಗ್ಲಾದೇಶ, ಪಾಕಿಸ್ಥಾನ, ಚೀನ, ನೈಜೀರಿಯ ಮತ್ತು ಇಂಡೋನೇಷ್ಯಾದಲ್ಲಿ ವಾಯುಮಾಲಿನ್ಯ ಹೆಚ್ಚಿದೆ. ಇದು ಅಲ್ಲಿನ ನಿವಾಸಿಗಳ ಜೀವಿತಾವಧಿ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ. ಸೇವಿಸುತ್ತಿರುವ ಗಾಳಿಯ ಕಾರಣದಿಂದಾಗಿ ಅವರ ಸರಾಸರಿ ಜೀವಿತಾವಧಿಯು ಒಂದು ವರ್ಷದಿಂದ ಆರು ವರ್ಷಗಳಷ್ಟು ಕಡಿಮೆಯಾಗಿದೆ. ಜತೆಗೆ ಏಷ್ಯಾ ಮತ್ತು ಆಫ್ರಿಕಾ ಖಂಡದ ಹಲವು ವಾಯು ಮಾಲಿನ್ಯ ಹೆಚ್ಚಿರುವ ರಾಷ್ಟ್ರಗಳಲ್ಲಿ ಅದನ್ನು ನಿಯಂತ್ರಿಸಲು ಸೂಕ್ತ ಮೂಲ ಸೌಕರ್ಯಗಳಿಲ್ಲ’ ಎಂದು ಚಿಕಾಗೊ ವಿಶ್ವವಿದ್ಯಾನಿಲಯದ ಪ್ರೊ| ಮೈಕೆಲ್‌ ಗ್ರೀನ್‌ಸ್ಟೋನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next