Advertisement

ಕೋವಿಡ್ 19 ಗಂಭೀರತೆಗೆ ವಾಯುಮಾಲಿನ್ಯವೂ ಕಾರಣ : ಅಧ್ಯಯನ ವರದಿ

02:08 PM Apr 08, 2021 | Team Udayavani |

ನ್ಯೂಯಾರ್ಕ್ :  ವಾಯು ಮಾಲಿನ್ಯ ಕೂಡ ಕೋವಿಡ್ 19 ಗೆ ಕಾರಣವಾಗುತ್ತಿದೆ ಎಂಬ ಆಘಾತಕಾರಿ ಸುದ್ದಿಯೊಂದು ಅಧ್ಯಯನದ ಮೂಲಕ ಹೊರಬಿದ್ದಿದೆ.

Advertisement

ಹೆಚ್ಚಿದ ವಾಯುಮಾಲಿನ್ಯವು ಕೋವಿಡ್ -19 ಗೆ ಕಾರಣವಾಗುವ ವೈರಸ್ SARS-CoV-2 ನಿಂದ ಬಳಲುತ್ತಿರುವ ಜನರ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎಂದು ಅಧ್ಯಯನಗಳ ವಿಮರ್ಶೆಯಿಂದ ತಿಳಿದು ಬಂದಿದೆ ಎಂಬ ವರದಿಯಾಗಿದೆ.

ಧೂಳಿನ ಸಣ್ಣ ಕಣವೊಂದರ ಸೇವನೆಯಿಂದಲೂ ಕೂಡ ಕೋವಿಡ್ 19 ನ ತೀವ್ರತೆಗೆ ಕಾರಣವಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ. ಕೋವಿಡ್ 19 ನ ಸಾಂಕ್ರಾಮಿಕದ ಸಂದರ್ಭದಲ್ಲಿ ವಾಯು ಮಾಲಿನ್ಯದ ಕಾರಣದಿಂದ ಮರಣದ ಪ್ರಮಾಣ ಶೇಕಡಾ 8ರಷ್ಟು ಹೆಚ್ಚಳವಾಗಿತ್ತು ಎಂದು ಅನ್ನಲ್ಸ್ ಜರ್ನಲ್‌ ನ ಆನ್‌ ಲೈನ್‌ ನಲ್ಲಿ ಆವೃತ್ತಿಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಸಂಶೋಧಕರು ಹೇಳಿದ್ದಾರೆ.

ಓದಿ : ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲ್ಲ: ಮಾಜಿ ಸಚಿವ ಬಾಬಾಗೌಡ ಪಾಟೀಲ

ಯು ಎಸ್ ನ ಬೋಸ್ಟನ್ ನಲ್ಲಿರುವ ಬೆಥ್ ಇಸ್ರೇಲ್ ಡಿಕಾನೆಸ್ ಮೆಡಿಕಲ್ ಸೆಂಟರ್ ನ ಔಷಧ ವಿಭಾಗದ ಸ್ಟೀಫನ್ ಆಂಡ್ರ್ಯೂ ಮೇನ್ ನೇತೃತ್ವದ ತಂಡವು, ವಾಯುಮಾಲಿನ್ಯವು ಕೋವಿಡ್ -19ಗೆ ಕಾರಣವಾಗುತ್ತಿರಬಹುದೇ ಎಂಬ ಅಧ್ಯಯನ ನಡೆಸಿತ್ತು. ಈ ಅಧ್ಯಯನದ ಪರಿಣಾಮವಾಗಿ ವಿಶ್ವಾದ್ಯಂತ ಕೋವಿಡ್ -19 ನಿಂದ ಉಂಟಾದ ಮರಣಕ್ಕೆ 15 ಪ್ರತಿಶತದಷ್ಟು ವಾಯುಮಾಲಿನ್ಯವು ಕಾರಣವಾಗಿದೆ ಎಂದು ಶಂಶೋಧಕರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆಂದು ವರದಿ ತಿಳಿಸಿದೆ.

Advertisement

ಕೋವಿಡ್ -19 ಸಾಂಕ್ರಾಮಿಕವು  ವಾಯುಮಾಲಿನ್ಯದ ವ್ಯಾಪಕ ಆರೋಗ್ಯ ಪರಿಣಾಮಗಳನ್ನು ಎತ್ತಿ ತೋರಿಸಿದೆ, ಇದರಲ್ಲಿ ಉಸಿರಾಟದ ಮೇಲೆ ತೀವ್ರವಾದ ಪರಿಣಾಮಗಳು ಮತ್ತು ದೀರ್ಘಕಾಲದ ಹೃದಯ ರಕ್ತನಾಳದ ಕಾಯಿಲೆ ಮತ್ತು ತೀವ್ರ ಉಸಿರಾಟದ ತೊಂದರೆ ಸಿಂಡ್ರೋಮ್ ಹೆಚ್ಚಿನ ಅಪಾಯಕ್ಕೆ ಕಾರಣವಾಗುವ ದೀರ್ಘಕಾಲದ ಪರಿಣಾಮಗಳು ಸೇರಿವೆ ಎಂದು ಸಂಶೋಧಕ ಮೇನ್ ಹೇಳಿದ್ದಾರೆ.

ಓದಿ : 30 ವರ್ಷಗಳ ನಂತ್ರ ಉಗುರನ್ನು ಕತ್ತರಿಸಿದ ಮಹಿಳೆ : ಆ ಉಗುರುಗಳ ಉದ್ದ ಎಷ್ಟು ಗೊತ್ತಾ?

Advertisement

Udayavani is now on Telegram. Click here to join our channel and stay updated with the latest news.

Next