Advertisement

Air India: ಏರ್ ಇಂಡಿಯಾದ ನೂತನ ಲೋಗೋ ಅನಾವರಣ ಮಾಡಿದ ಟಾಟಾ ಸಂಸ್ಥೆ… ಹೇಗಿದೆ ವಿನ್ಯಾಸ

08:41 AM Aug 11, 2023 | Team Udayavani |

ನವದೆಹಲಿ: ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಗುರುವಾರ ಹೊಸ ಲೋಗೋವನ್ನು ಅನಾವರಣ ಮಾಡಿದೆ.

Advertisement

ಇದೇ ವೇಳೆ ಏರ್ ಇಂಡಿಯಾ ವಿಮಾನದ ಬಣ್ಣದಲ್ಲೂ ಕೊಂಚ ಬದಲಾವಣೆಯನ್ನು ಮಾಡಿದೆ. ವಿಶೇಷ ಅಂದರೆ ಏರ್ ಇಂಡಿಯಾ ಹೊಸ ಲೋಗೋಗೆ ‘ದಿ ವಿಸ್ತಾ’ ಎಂದು ನಾಮಕರಣ ಮಾಡಲಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಸ್ವಾಧೀನಪಡಿಸಿಕೊಂಡ ಒಂದೂವರೆ ವರ್ಷಗಳ ಬಳಿಕ ಸಂಸ್ಥೆಗೆ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸಿದಂತಾಗಿದೆ.

ಏರ್​ ಇಂಡಿಯಾ ತನ್ನ ಲೋಗೋದ ಭಾಗವಾಗಿ ಕೆಂಪು ಮತ್ತು ಬಿಳಿ ಬಣ್ಣವನ್ನು ಹಾಗೆಯೇ ಉಳಿಸಿಕೊಂಡಿದ್ದು. ನೇರಳೆ ಬಣ್ಣದ ಡ್ಯಾಶ್‌ ಸೇರಿಸಲಾಗಿದೆ.

ವಿಮಾನಯಾನ ಸಂಸ್ಥೆಯು ತನ್ನ ಹೊಸ ಬಾಲ ವಿನ್ಯಾಸ ಮತ್ತು ಥೀಮ್ ಹಾಡನ್ನು ಸಹ ಬಹಿರಂಗಪಡಿಸಿತು. ಹೊಸ ಲೋಗೋ ಅಗಾಧ ಸಾಧ್ಯತೆಗಳು ಮತ್ತು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಹೇಳಿದ್ದಾರೆ.

Advertisement

ಏರ್ ಇಂಡಿಯಾದ ಹೊಸ ಲೋಗೋವು ಏರ್‌ಲೈನ್‌ನ ಹೊಸ ಗುರುತು ಮತ್ತು ಮರುಬ್ರಾಂಡಿಂಗ್‌ನ ಭಾಗವಾಗಿದೆ. ಏರ್ ಇಂಡಿಯಾ ಒಂದು ವ್ಯಾಪಾರವಲ್ಲ, ಟಾಟಾ ಸಮೂಹಕ್ಕೆ ಇದು ಉತ್ಸಾಹ ಈ ಉತ್ಸಾಹವು ರಾಷ್ಟ್ರೀಯ ಮಿಷನ್ ಆಗಿದೆ. ಏರ್ ಇಂಡಿಯಾವನ್ನು ವಿಶ್ವದರ್ಜೆಯ ವಿಮಾನಯಾನ ಮಾಡುವ ಪಯಣ ಈಗಷ್ಟೇ ಆರಂಭವಾಗಿದೆ. ಏರ್ ಇಂಡಿಯಾ ತನ್ನ ರೀಬ್ರಾಂಡಿಂಗ್ ಅನ್ನು ಅಪಾರ ವಿಶ್ವಾಸದೊಂದಿಗೆ ಮಾಡಿದೆ. 15 ತಿಂಗಳ ಪ್ರಯಾಣದಲ್ಲಿ ಅತ್ಯುತ್ತಮ ಅನುಭವ, ತಂತ್ರಜ್ಞಾನ, ಗ್ರಾಹಕ ಸೇವೆಯೊಂದಿಗೆ ಏರ್ ಇಂಡಿಯಾವನ್ನು ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆಯನ್ನಾಗಿ ಮಾಡಲು ನಾವು ಬಯಸುತ್ತೇವೆ ಎಂದು ಹೇಳಿದರು.

ಗುರುವಾರ ಸಂಜೆ ನಡೆದ ಲೈವ್ ಕಾರ್ಯಕ್ರಮದಲ್ಲಿ ಏರ್ ಇಂಡಿಯಾ ತನ್ನ ಹೊಸ ಲೋಗೋವನ್ನು ಅನಾವರಣಗೊಳಿಸಲಾಯಿತು.

ಏರ್‌ಬಸ್ ಹಾಗೂ ಬೋಯಿಂಗ್ ಕಂಪನಿಗಳಿಂದ 470 ವಿಮಾನಗಳ ಖರೀದಿಗೆ ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಡಿಸೆಂಬರ್‌ನಿಂದ ನೂತನ ವಿಮಾನಗಳು ಹೊಸ ರೂಪ ಹಾಗೂ ವಿನ್ಯಾಸದೊಂದಿಗೆ ಹಾರಾಟ ಪ್ರಾರಂಭಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: Asian Champions Trophy ಹಾಕಿ ಸೆಮಿಫೈನಲ್ಸ್‌ ; ಇಂದು ಭಾರತಕ್ಕೆ ಜಪಾನ್‌ ಸವಾಲು

Advertisement

Udayavani is now on Telegram. Click here to join our channel and stay updated with the latest news.

Next