Advertisement

ಮಾರ್ಚ್‌ 22ರಿಂದ ದಿಲ್ಲಿ –ಟೆಲ್‌ ಅವೀವ್‌ ಏರಿಂಡಿಯಾ ಹಾರಾಟ

05:17 PM Mar 19, 2018 | Team Udayavani |

ಮುಂಬಯಿ : ಇದೇ ಗುರುವಾರದಿಂದ ಏರಿಂಡಿಯಾ ವಿಮಾನ ಯಾನ ಸಂಸ್ಥೆ ಹೊಸದಿಲ್ಲಿ -ಟೆಲ್‌ ಅವೀವ್‌ ಮಾರ್ಗದಲ್ಲಿ ತನ್ನ 256 ಆಸನಗಳ ಬೋಯಿಂಗ್‌ 787-800 ವಿಮಾನದ ಹಾರಾಟವನ್ನು ಆರಂಭಿಸಲಿದೆ.

Advertisement

ಸೌದಿ ಅರೇಬಿಯವು ಭಾರತಕ್ಕೆ ತನ್ನ ವಾಯು ಪ್ರದೇಶದಲ್ಲಿ ಹಾರಾಟ ನಡೆಸುವುದಕ್ಕೆ ಅನುಮತಿ ನೀಡಿರುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಪ್ರಕಟಿಸಿದ್ದರು.

ಆ ಬಳಿಕದಲ್ಲಿ ಏರಿಂಡಿಯಾ ಇದೇ ಮಾರ್ಚ್‌ 22ರಿಂದ ತಾನು ಹೊಸದಿಲ್ಲಿ – ಟೆಲ್‌ ಅವೀವ್‌ ಮಾರ್ಗದಲ್ಲಿ ವಾರಕ್ಕೆ ಮೂರು ಬಾರಿ ವಿಮಾನ ಹಾರಾಟ ನಡೆಸುವುದಾಗಿ ಕಳೆದ ಮಾರ್ಚ್‌ 7ರಂದು ಪ್ರಕಟಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next