ನವದೆಹಲಿ: ಟಾಟಾ ಗ್ರೂಪ್‌ನ ವಶಕ್ಕೆ ಗುರುವಾರ ಏರ್ ಇಂಡಿಯಾವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಹಸ್ತಾಂತರಿಸುವ ಸಾಧ್ಯತೆ ಇದೆ. ಈ ಮೂಲಕ 69 ವರ್ಷಗಳ ನಂತರ ಏರ್ ಇಂಡಿಯಾ ಮತ್ತೆ ತವರುಮನೆಗೆ ಮರಳಲಿದೆ.
ವಸ್ತುಸ್ಥಿತಿಯಲ್ಲಿ ಜೆಆರ್‌ಡಿ ಟಾಟಾ 1932ರಲ್ಲಿ ಟಾಟಾ ಏರ್‌ಲೈನ್ಸ್ ಶುರು ಮಾಡಿದ್ದರು. 1946ರಲ್ಲಿ ಇದನ್ನು ಸರ್ಕಾರ ವಶ ಮಾಡಿಕೊಂಡಿತ್ತು. ಇದೀಗ ಟಾಟಾ 18,000 ಕೋಟಿ ರೂ. ನೀಡಿ ಏರ್ ಇಂಡಿಯಾವನ್ನು ಖರೀದಿಸಿದೆ.
ಈ ಮಧ್ಯೆ ಪೈಲಟ್‌ಗಳ ಎರಡು ಸಂಘಗಳಾದ ಇಂಡಿಯನ್ ಪೈಲಟ್ಸ್ ಗಿಲ್ಡ್ (ಐಪಿಜಿ), ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಷನ್ (ಐಸಿಪಿಎ) ಏರ್ ಇಂಡಿಯಾ ಸಿಇಒ ವಿಕ್ರಮ್ ದೇವ್ ದತ್‌ಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿವೆ.
ಇದನ್ನೂ ಓದಿ:ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು
ಪೈಲಟ್‌ಗಳಿಗೆ ಕೊಡಲು ಬಾಕಿಯುಳಿಸಿಕೊಂಡಿರುವ ಹಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಹಲವಾರು ಕಡಿತಗಳನ್ನು ಮಾಡಿದೆ. ಅದನ್ನು ಸರಿ ಮಾಡಬೇಕು ಎಂದು ಒತ್ತಾಯಿಸಿವೆ.