Advertisement

ಏರಿಂಡಿಯಾ ಗ್ರೌಂಡ್‌ ಸ್ಟಾಫ್ ಮುಷ್ಕರ: ಹಲವು ವಿಮಾನ ಹಾರಾಟ ವಿಳಂಬ

11:23 AM Nov 08, 2018 | udayavani editorial |

ಮುಂಬಯಿ : ಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಏರಿಂಡಿಯಾ ಗ್ರೌಂಡ್‌ ಸ್ಟಾಫ್ ಮುಷ್ಕರ ಹೂಡಿರುವ ಪರಿಣಾಮವಾಗಿ ಇಲ್ಲಿಂದ ಇಂದು ವಿವಿಧ ತಾಣಗಳಿಗೆ ಹಾರಲಿದ್ದ  ಹಲವು ಏರಿಂಡಿಯಾ ವಿಮಾನಗಳ ಹಾರಾಟ ವಿಳಂಬಗೊಂಡಿರುವುದಾಗಿ ವರದಿಯಾಗಿದೆ.

Advertisement

ಕಳೆದ ಬುಧವಾರ ರಾತ್ರಿಯಿಂದ ಏರಿಂಡಿಯಾ ಏರ್‌ ಟ್ರಾನ್ಸ್‌ ಪೋರ್ಟ್‌  ಸರ್ವಿಸಸ್‌ ಲಿಮಿಟೆಡ್‌ (ಎಐಎಟಿಎಸ್‌ಎಲ್‌) ನ ಗುತ್ತಿಗೆ ಗ್ರೌಂಡ್‌ ಸ್ಟಾಫ್ ಮುಷ್ಕರ ನಿರತರಾಗಿದ್ದಾರೆ. 

ಈ ನಡುವೆ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಹೇಳಿಕೆಯೊಂದರಲ್ಲಿ ಏರಿಂಡಿಯಾ  “ವಿಮಾನ ಹಾರಾಟಗಳನ್ನು ಮಾಮೂಲಿ ಸ್ಥಿತಿಗೆ ತರುವಲ್ಲಿ  ಕಾಯಂ ಸಿಬಂದಿಗಳನ್ನು ನಿಯೋಜಿಸಲಾಗಿದೆ’ ಎಂದು ಹೇಳಿದೆ. ಮುಂಬಯಿಂದ ಇಂದು ನಸುಕಿನ ವೇಳೆ ಹೊರಡಬೇಕಿದ್ದ ಏರಿಂಡಿಯಾದ ವಿಮಾನಗಳ ಹಾರಾಟ ಎರಡು ತಾಸು ವಿಳಂಬವಾಗಿದೆ ಎಂದು ಪ್ರಕಟನೆಯಲ್ಲಿ ಹೇಳಿದೆ.

ನಾವು ವಾಸ್ತವತೆಯನ್ನು ಪರಿಶೀಲಿಸುತ್ತಿದ್ದೇವೆ; ವಿಮಾನ ಹಾರಾಟದಲ್ಲಿನ ವಿಳಂಬ ಮತ್ತು ಅಡಚಣೆಗಳನ್ನು ಕನಿಷ್ಠ ಗೊಳಿಸುವ ಎಲ್ಲ ಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಏರಿಂಡಿಯಾ ವಕ್ತಾರ ಎಎನ್‌ಐ ಜತೆಗೆ ಮಾತನಾಡುತ್ತಾ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next