Advertisement

Air India; ಕೊನೆಗೂ ಸಿಬಂದಿಗೆ ವೇತನ ಹೆಚ್ಚಳ; ಪೈಲಟ್‌ಗಳಿಗೆ ಕಾರ್ಯಕ್ಷಮತೆಯ ಗುರಿ

08:02 PM May 23, 2024 | Team Udayavani |

ಹೊಸದಿಲ್ಲಿ: ಏರ್ ಇಂಡಿಯಾ ಗುರುವಾರ ತನ್ನ ಸಿಬಂದಿಗೆ ವಾರ್ಷಿಕ ವೇತನ ಹೆಚ್ಚಳವನ್ನು ಘೋಷಿಸಿದ್ದು, ಪೈಲಟ್‌ಗಳಿಗೆ ವಾರ್ಷಿಕ ಗುರಿ ಕಾರ್ಯಕ್ಷಮತೆ ಬೋನಸ್ ಅನ್ನು ಪರಿಚಯಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಯನ್ನು ಕಳೆದ ಎರಡು ವರ್ಷಗಳ ಹಿಂದೆ ಟಾಟಾ ಗ್ರೂಪ್ ವಹಿಸಿಕೊಂಡ ನಂತರ ಇದು ಮೊದಲ ಮೌಲ್ಯಮಾಪನ ಪ್ರಕ್ರಿಯೆಯಾಗಿದೆ.

ಏರ್ ಇಂಡಿಯಾ ಸಿಎಚ್‌ಆರ್‌ಒ ರವೀಂದ್ರ ಕುಮಾರ್ ಜಿ.ಪಿ. ಅವರು ಗುರುವಾರ ಉದ್ಯೋಗಿಗಳಿಗೆ 2024 ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳವನ್ನು ಘೋಷಿಸಿದ್ದಾರೆ. ಕಂಪನಿ ಮತ್ತು ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ 2023-24ರ ಹಣಕಾಸು ವರ್ಷದಲ್ಲಿ ಕಾರ್ಯಕ್ಷಮತೆಯ ಬೋನಸ್ ಪಾವತಿಗಳನ್ನು ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಸುಮಾರು 18,000 ಉದ್ಯೋಗಿಗಳನ್ನು ಹೊಂದಿದೆ.

ಏರ್ ಇಂಡಿಯಾ ಸಮೂಹವು ನಾಲ್ಕು ಏರ್‌ಲೈನ್‌ಗಳನ್ನು ಹೊಂದಿದ್ದು, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಎಐಎಕ್ಸ್ ಕನೆಕ್ಟ್ (ಹಿಂದೆ ಏರ್‌ಏಷ್ಯಾ ಇಂಡಿಯಾ) ಮತ್ತು ವಿಸ್ತಾರ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನೊಂದಿಗೆ ಎಐಎಕ್ಸ್ ಕನೆಕ್ಟ್ ಅನ್ನು ವಿಲೀನಗೊಳಿಸುತ್ತಿದೆ ಮತ್ತು ವಿಸ್ತಾರಾ ವು ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next