Advertisement

ಏರ್‌ಇಂಡಿಯಾಗೆ 1.4 ಮಿಲಿಯನ್‌ ಡಾಲರ್‌ ದಂಡ

07:25 PM Dec 21, 2022 | Team Udayavani |

ವಾಷಿಂಗ್ಟನ್‌: ವಿಮಾನಗಳ ರದ್ದತಿ ಅಥವಾ ಬದಲಾವಣೆ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮರುಪಾವತಿಯಲ್ಲಿ ತೀವ್ರ ವಿಳಂಬದ ಹಿನ್ನೆಲೆಯಲ್ಲಿ ಅಮೆರಿಕದ ಸಾರಿಗೆ ಇಲಾಖೆ ಏರ್‌ ಇಂಡಿಯಾಗೆ 1.4 ಮಿಲಿಯನ್‌ ಡಾಲರ್‌ ದಂಡ ವಿಧಿಸಿದೆ.

Advertisement

ಜತೆಗೆ ಪ್ರಯಾಣಿಕರಿಗೆ 121.5 ಮಿಲಿಯನ್‌ ಡಾಲರ್‌ ಮರುಪಾವತಿ ಮಾಡುವಂತೆ ಸೂಚಿಸಿದೆ. ಇದೇ ರೀತಿ ಆರು ಏರ್‌ಲೈನ್ಸ್‌ಗಳು ಒಟ್ಟು 600 ಮಿಲಿಯನ್‌ ಡಾಲರ್‌ ಮರುಪಾವತಿಗೆ ಒಪ್ಪಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಸಾರಿಗೆ ಇಲಾಖೆ ನಿಯಮ ಪ್ರಕಾರ, ವಿಮಾನಗಳ ರದ್ದತಿ ಅಥವಾ ಬದಲಾವಣೆ ಸಂದರ್ಭದಲ್ಲಿ ಏರ್‌ಲೈನ್ಸ್‌ಗಳು ಬೇರೆ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ಒದಗಿಸಬೇಕು. ಆದರೆ ಏರ್‌ ಇಂಡಿಯಾ, “ರಿಫ‌ಂಡ್‌ ಆನ್‌ ರಿಕ್ವೆಸ್ಟ್‌’ ನೀತಿ ಪ್ರಕಾರ ಹಣವನ್ನು ಹಿಂತಿರುಗಿಸುತ್ತದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next