Advertisement

ಮತ್ತಷ್ಟು ಹಾರೋಪ್‌ ಸೇರ್ಪಡೆಗೆ ವಾಯುಸೇನೆ ನಿರ್ಧಾರ

12:30 AM Jan 28, 2019 | Team Udayavani |

ಹೊಸದಿಲ್ಲಿ: ಮಾನವ ರಹಿತ ಸಮರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆ ಹೊಂದಿರುವ ಭಾರತೀಯ ವಾಯುಪಡೆ, ತನ್ನಲ್ಲಿರುವ ಚಾಲಕ ರಹಿತ ಹಾರೋಪ್‌ ಮಾದರಿಯ ಡ್ರೋಣ್‌ ತಂತ್ರಜ್ಞಾನ ಆಧಾರಿತ ಯುದ್ಧ ವಿಮಾನಗಳ ಸಮೂಹಕ್ಕೆ ಇನ್ನೂ 15 ವಿಮಾನಗಳನ್ನು ಸೇರ್ಪಡೆಗೊಳಿಸಲು ತೀರ್ಮಾನಿಸಿದೆ. ಶತ್ರು ವಲಯದ ಉನ್ನತ ಮಟ್ಟದ ಸೇನಾ ನೆಲೆಗಳ ಮೇಲೆರಗಿ ಅವನ್ನು ಧ್ವಂಸ ಮಾಡುವ ಛಾತಿಯನ್ನು ಹಾರೋಪ್‌ ಮಾದರಿ ಯುದ್ಧ ವಿಮಾನಗಳು ಹೊಂದಿವೆ. 

Advertisement

ಮುಂದಿನ ವಾರ, ರಕ್ಷಣಾ ಸಚಿ ವಾಲಯ ಹಾಗೂ ವಾಯು ಸೇನೆಯ ಅಧಿಕಾರಿಗಳುಳ್ಳ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಕೇಂದ್ರ ಸರಕಾರಕ್ಕೆ ಹಾರೋಪ್‌ ಯುದ್ಧ ವಿಮಾನ ಕೊಳ್ಳುವಿಕೆ ಬಗ್ಗೆ ಹೊಸ ಪ್ರಸ್ತಾವನೆ ಮಂಡಿಸುವ ಬಗ್ಗೆ ಚರ್ಚಿ ಸಲಾಗುತ್ತದೆ ಎಂದು ರಕ್ಷಣಾ ಇಲಾಖೆ ಹೇಳಿದೆ. 

ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ಸಿಕ್ಕಲ್ಲಿ, ಈಗಾಗಲೇ ಭಾರತಕ್ಕೆ ಮಾನವ ರಹಿತ ವಿಚಕ್ಷಣಾ ವಿಮಾನ ಹಾಗೂ ಯುದ್ಧ ವಿಮಾನಗಳನ್ನು ಸರಬರಾಜು ಮಾಡುತ್ತಿರುವ ಇಸ್ರೇಲ್‌ಗೆ ಹೊಸ ಮಾದರಿ ವಿಮಾನಗಳ ತಯಾರಿಕೆಗೆ ಸೂಚಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next