Advertisement

ವಾಯುಪಡೆ ಯುದ್ಧಕ್ಕೆ ಸರ್ವ ಸನ್ನದ್ಧವಾಗಿದೆ: ವಾಯುಪಡೆ ಮುಖ್ಯಸ್ಥ 

03:11 PM Oct 08, 2017 | |

ಗಾಜಿಯಾಬಾದ್‌: ‘ಅಗತ್ಯ ಬಿದ್ದಲ್ಲಿ ಅಲ್ಪಾವಧಿಯಲ್ಲೇ ಯುದ್ಧ ನಡೆಸಲು ಭಾರತೀಯ ವಾಯುಪಡೆ ಸರ್ವ ಸನ್ನದ್ಧವಾಗಿದೆ’ ಎಂದು ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಬಿ.ಎಸ್‌.ಧನೋಹಾ ದೇಶಕ್ಕೆ ಭರವಸೆ ನೀಡಿದ್ದಾರೆ. 

Advertisement

ವಾಯುಪಡೆಯ 85 ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ನಮ್ಮ ಮುಖ್ಯ ಉದ್ದೇಶ ಶಾಂತಿಯೇ ಆಗಿದೆ. ಆದರೆ ಅಗತ್ಯ ಪರಿಸ್ಥಿತಿ ನಿರ್ಮಾಣವಾದಲ್ಲಿ  ಕ್ಷಿಪ್ರಗತಿಯಲ್ಲಿ  ಹೋರಾಡಲು ನಾವು ಸಿದ್ದವಾಗಿದ್ದು, ಭೂ ಸೇನೆ ಮತ್ತು ನೌಕಾಪಡೆಯೊಂದಿಗೆ ಕೆಲಸ ಮಾಡಲು ಶಕ್ತರಿದ್ದೇವೆ’ ಎಂದಿದ್ದಾರೆ. 

ಗಾಜಿಯಾಬಾದ್‌ನ ಹಿಂದೋನ್‌ ವಾಯುನೆಲೆಯಲ್ಲಿ ವಾಯುಪಡೆಯ 85 ನೇ ವರ್ಷಾಚರಣೆ ಆಚರಿಸಲಾಗಿದ್ದು ವಾಯುಪಡೆಯ ವಿಮಾನಗಳಲ್ಲಿ ವಿವಿಧ ಕಸರತ್ತುಗಳನ್ನು ಪ್ರದರ್ಶಿಸಲಾಯಿತು. 

ಕಳೆದ ತಿಂಗಳಿನಲ್ಲಿ  ಏರ್‌ ಚೀಫ್ ಮಾರ್ಷಲ್‌ ಬಿ.ಎಸ್‌.ಧನೋಹಾ ಅವರು ‘ನಾವು ಚೀನಾ ಮತ್ತು ಪಾಕಿಸ್ಥಾನವನ್ನು ಒಟ್ಟಿಗೆ ಎದುರಿಸಲು ಶಕ್ತರಿದ್ದೇವೆ’ ಎಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next