ಅಹಮದಾಬಾದ್ : ಜ್ಞಾನವ್ಯಾಪಿ ಮಸೀದಿ ಗದ್ದಲದ ನಡುವೆ ಶಿವಲಿಂಗದ ಕುರಿತು ಅವಹೇಳನಕಾರಿ ಟ್ವೀಟ್
ಮಾಡಿದ್ದಕ್ಕಾಗಿ ಎಐಎಂಐಎಂ ನಾಯಕ ಡ್ಯಾನಿಶ್ ಖುರೇಷಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅಹಮದಾಬಾದ್ ಪೊಲೀಸರ ಸೈಬರ್ ಕ್ರೈಂ ಬ್ರಾಂಚ್ ಡ್ಯಾನಿಶ್ ಖುರೇಷಿಯನ್ನು ಬಂಧಿಸಿದೆ.
ಖುರೇಷಿ ತಮ್ಮ ಟ್ವೀಟ್‌ನಲ್ಲಿ ಹಿಂದೂ ಭಾವನೆಗಳನ್ನು ಅಗೌರವಿಸಿದ್ದಾರೆ ಮತ್ತು ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯಲ್ಲಿ ಕಂಡುಬಂದ ಶಿವಲಿಂಗವನ್ನು ಪ್ರಶ್ನಿಸಿ ಶಿವಲಿಂಗದ ಬಗ್ಗೆ ಅತ್ಯಂತ ಆಕ್ಷೇಪಾರ್ಹವಾದ ಕಾಮೆಂಟ್ ಅನ್ನು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ : ಕುತುಬ್ ಮಿನಾರ್ ರಾಜ ವಿಕ್ರಮಾದಿತ್ಯ ನಿರ್ಮಿಸಿದ್ದು: ಧರಂ ವೀರ್ ಶರ್ಮಾ
ಟ್ವೀಟ್ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಟ್ವಿಟ್‌ನ ವಿಷಯವು ಬಹುಸಂಖ್ಯಾತ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದೆ, ಆದ್ದರಿಂದ ತಂಡವು ಟ್ವಿಟರ್ ಹ್ಯಾಂಡ್ಲರ್‌ನ ತಾಂತ್ರಿಕ ಹುಡುಕಾಟವನ್ನು ಪ್ರಾರಂಭಿಸಿದೆ ಎಂದು ಸೈಬರ್ ಕ್ರೈಮ್‌ನ ಸಹಾಯಕ ಪೊಲೀಸ್ ಕಮಿಷನರ್ ಜೆಎಂ ಯಾದವ್ ಉಲ್ಲೇಖಿಸಿದ್ದಾರೆ.