Advertisement

 ಐಕಳ: ಪೂರ್ವಭಾವಿ ಕಂಬಳ 

04:44 PM Jan 27, 2018 | Team Udayavani |

ಐಕಳ: ಕಂಬಳ ಕ್ರೀಡೆ ನಮ್ಮ ತುಳುನಾಡಿನ ಧಾಮಿಕ ಆಚರಣೆ- ಸಂಸ್ಕೃತಿಯ ಮೂಲ ಸತ್ವವಾಗಿದೆ. ಈ ಆಚರಣೆಗಳು ಪ್ರಕೃತಿಯ ಆರಾಧನೆ ಹಾಗೂ ಪೂರ್ವಿಕರ ಧಾರ್ಮಿಕತೆಯ ನೆಲಗಟ್ಟಿನಲ್ಲಿ ನಿಂತಿದೆ. ಇದರಲ್ಲಿ ಹಿಂಸೆ ನಡೆಯುತ್ತಿಲ್ಲ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್‌ ಶೆಟ್ಟಿ ಹೇಳಿದರು. ಅವರು ಐಕಳ ಕಂಬಳದ ವಠಾರದಲ್ಲಿ ತುಳುನಾಡಿನ ಐಕಳಬಾವ ಕಾಂತಾಬಾರೆ- ಬೂದಾಬಾರೆ ಜೋಡುಕರೆ ಕಂಬಳದ ಪೂರ್ವಭಾವಿಯಾಗಿ ಕಂಬಳದ ಗದ್ದೆಗೆ ಕೋಣ ಇಳಿಸಿ ಕಂಬಳಕ್ಕೆ ಚಾಲನೆ ನೀಡಿದರು.

Advertisement

ಏಳಿಂಜೆ ಲಕ್ಷ್ಮೀಜನಾರ್ದನ ದೇವಸ್ಥಾನದ ಅರ್ಚಕ ಗಣೇಶ್‌ ಭಟ್‌ ಸಾಂಪ್ರದಾಯದಂತೆ ಗದ್ದೆಗೆ ಪೂಜೆ ಸಲ್ಲಿಸಿದ ಬಳಿಕ ಕಂಬಳದ ಕೋಣಗಳನ್ನು ಗದ್ದೆಗೆ ಇಳಿಸಲಾಯಿತು. ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ ಭಂಡಾರಿ ಐಕಳಬಾವ, ಐಕಳ ಬಾವ ಯಜಮಾನ ದೋಗಣ್ಣ ಶೆಟ್ಟಿ, ಸಂಚಾಲಕ ಐಕಳ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್‌ ಶೆಟ್ಟಿ ಪಡುಹಿತ್ಲು, ಪ್ರ.ಕಾ. ಕೃಷ್ಣ ಮಾರ್ಲ ಹಿರಿಮನೆ, ಉಪಾಧ್ಯಕ್ಷ ವೈ. ಯೋಗೀಶ್‌ ರಾವ್‌, ವರುಣ್‌ ಭಟ್‌ ಏಳಿಂಜೆ, ಲೀಲಾಧರ ಶೆಟ್ಟಿ, ಸ್ವರಾಜ್‌ ಶೆಟ್ಟಿ , ಕಂಬಳ ಸಮಿತಿಯ ಜಯಪಾಲ ಶೆಟ್ಟಿ ಐಕಳ, ಸದಾನಂದ ಕುಂದರ್‌, ಆನಂದ ಗೌಡ, ಶ್ರೀಶ ಸರಾಫ್‌ ಐಕಳ, ಸುರೇಶ್‌ ಎಂ. ಶೆಟ್ಟಿ, ರಾಘವೇಂದ್ರ ಪೂಜಾರಿ, ಹರೀಶ್‌ ಶೆಟ್ಟಿ ತಾಮಣಿಗುತ್ತು, ಸುರೇಶ್‌ ಎಂ. ಕೋಟ್ಯಾನ್‌ ಪಟ್ಟೆ, ಚೇತನ್‌ ಪೂಜಾರಿ, ಕೇಶವ ಶೆಟ್ಟಿ, ಯತಿರಾಜ ರೈ, ಸುರೇಂದ್ರ ಶೆಟ್ಟಿ ಹೊಸಗದ್ದೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next