Advertisement

ಐಕಳ ಹರೀಶ್‌ ಶೆಟ್ಟಿ ಅವರಿಗೆ ಸುರತ್ಕಲ್‌ ಬಂಟರ ಸಂಘದಿಂದ ಸಮ್ಮಾನ

05:25 PM Jun 20, 2019 | Vishnu Das |

ಮುಂಬಯಿ: ಬಂಟರ ಸಮಾಜದ ಯುವಕರು ಸಂಘ ಸಂಸ್ಥೆಗಳಲ್ಲಿ ಭಾಗವಹಿಸಿ ಮುಂದೆ ಸಮಾಜದ ನಾಯಕತ್ವ ವಹಿಸಲು ಸಿದ್ಧರಾಗಬೇಕು. ಮನೆ ನಿರ್ಮಾಣ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆ ಕೀ ಹಸ್ಥಾಂತರಿಸಿದ ಐಕಳ ಹರೀಶ್‌ ಶೆಟ್ಟಿಯವರು ಜಾಗತಿಕ ಬಂಟರ ಸಂಘದಿಂದ ಸಮಾಜದ ಬಡವರಿಗೆ ನೂರು ಮನೆ ನಿರ್ಮಿಸುವ ಯೋಜನೆ ಇದ್ದು, ಈ ಪೈಕಿ ಐವತ್ತು ಮನೆ ನಿರ್ಮಾಣ ಕಾರ್ಯ ಅರಂಭಿಸಲಾಗಿದೆ. ಇಪ್ಪತ್ತೆ$çದು ಮನೆ ಪೂರ್ಣವಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ನುಡಿದರು.

Advertisement

ಬಂಟರ ಸಂಘ ಸುರತ್ಕಲ್‌ ಇದರ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ನಡೆದಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.

ಸಮಾರಂಭದ ಉದ್ಘಾಟನೆಯನ್ನು ಬಂಟರ ಯಾನೆ ನಾವಡರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್‌ ರೈ ಅವರು ನೆರವೇರಿಸಿ, ಯಾವುದೇ ಸಂಘ ಸ್ಥಾಪನೆ ಮಾಡುವ ಹಿಂದಿನ ಉದ್ದೇಶವೆಂದರೆ ಸಂಘದ ಮುಖಾಂತರ ಸಮಾಜದ ಜನತೆಗೆ ಒಳ್ಳೆಯ ಸಂಸ್ಕಾರ ಸಂಸ್ಕೃತಿ ಮೂಲಕ ಸಾಮಾಜಿಕ, ಧಾರ್ಮಿಕವಾಗಿ ಎಲ್ಲ ಜನರೊಂದಿಗೆ ಬೆರೆಯುವಂತಹ ಕೆಲಸವನ್ನು ಮಾಡುತ್ತಾ ಮುನ್ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಮಾಹಿತಿ ಪುಸ್ತಕ ಪೊಲಬು ಬಿಡುಗಡೆಗೊಳಿಸಿದ ಶ್ರೀದೇವಿ ಎಜುಕೇಶನಲ್‌ ಟ್ರಸ್ಟ್‌ ಕಾರ್ಯಾಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿ, ಬಂಟರ ಸಂಘದ ವತಿಯಿಂದ ಪ್ರತಿ ಸಮಾಜದ ಬಡ ಜನರ ನೋವನ್ನು ನೀಗಿಸುವ ಕೆಲಸವನ್ನು ಮಾಡಿದೆ. ಸಾಮಾಜಿಕವಾಗಿ ಧಾರ್ಮಿಕವಾಗಿ ಎಲ್ಲಾ ಕಾರ್ಯಗಳಲ್ಲಿ ತನ್ನ ಮೇಲುಗೈ ಸಾಧಿಸಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುರತ್ಕಲ್‌ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್‌. ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ಹಮ್ಮಿಕೊಂಡ ಕಾರ್ಯಕ್ರಮದ ಕುರಿತು

Advertisement

ಮಾಹಿತಿ ನೀಡಿದರು. ಕಾರ್ಯ ಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಪಡುಬಿದ್ರೆ ಬಂಟರ ಸಂಘ ಅಧ್ಯಕ್ಷ ಡಾ| ಐಕಳಬಾವ ದೇವಿಪ್ರಸಾದ್‌ ಶೆಟ್ಟಿ, ಪ್ರಸಾದ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ಮಲಾಡ್‌ ಮುಂಬಯಿ ಇದರ ಆಡಳಿತ ನಿರ್ದೇಶಕ ಬಾಬು ಶೆಟ್ಟಿ ಪೆರಾರ, ಬಂಟರ ಯಾನೆ ನಾಡ ಮಾತೃ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಸಂಘದ ಉಪಾಧ್ಯಕ್ಷ ನವೀನ್‌ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಕಾರ್ಯದರ್ಶಿ ಲೋಕಯ್ಯ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣ್‌ ಶೆಟ್ಟಿ, ಬಂಟರ ಮಹಿಳಾ ವೇದಿಕೆ ಅಧ್ಯಕ್ಷೆ ಬೇಬಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್‌ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್‌ ಶೆಟ್ಟಿ ಉಪಸ್ಥಿತರಿದ್ದರು. ನವೀನ್‌ ಶೆಟ್ಟಿ ಪಡ್ರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ರಾಜೇಶ್ವರಿ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಬಂಟರ ಸಂಘ ಸುರತ್ಕಲ್‌ ಇದರ ಸಹಕಾರದಿಂದ ನಿರ್ಮಿಸಲ್ಪಟ್ಟ ಎರಡು ಮನೆಗಳ ಕೀಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧ ನೆಗೈದ ಸಾಧಕರನ್ನು ಅಭಿನಂ ದಿಸಲಾಯಿತು.

ವಿಧವೆಯರಿಗೆ, ಭಿನ್ನ ಸಾಮರ್ಥ್ಯ ದವರಿಗೆ ಹಾಗೂ ವಿಕಲಚೇತನರಿಗೆ ಸಹಾಯ ಹಸ್ತವನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸುರತ್ಕಲ್‌ ಬಂಟರ ಸಂಘದಿಂದ ನಡೆದ ಗ್ರಾಮವಾರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಇಡ್ಯಾ ಗ್ರಾಮ ಪ್ರಥಮ, ಚೇಳಾçರ್‌ ದ್ವಿತೀಯ, ಸುರತ್ಕಲ್‌ ತೃತೀಯ ಪ್ರಸಸ್ತಿ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next