“ಐಹೊಳೆ’- ಹೀಗೊಂದು ಹೆಸರಿನ ಚಿತ್ರ ಸದ್ದಿಲ್ಲದೇ ಆರಂಭವಾಗಿ ಈಗ ಭರದಿಂದ ಚಿತ್ರೀಕರಣ ಮಾಡುತ್ತಿದೆ. ರವೀಂದ್ರನಾಥ ಸಿರಿವರ ಈ ಚಿತ್ರದ ನಿರ್ದೇಶಕರು. ಸಿರಿವರ ಕ್ರಿಯೇಶನ್ಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ಐತಿಹಾಸಿಕ ಸ್ಥಳವಾಗಿರುವ ಐಹೊಳೆಯ ಇತಿಹಾಸವನ್ನು ಜಗತ್ತಿಗೆ ಸಾರುವ ಬಾಲಕನ ಕನಸಿನ ಸುತ್ತ ಹೆಣೆಯಲಾದ ಈ ಚಿತ್ರಕ್ಕೆ ಪತ್ರಕರ್ತ ಶಂಕರ ಪಾಗೋಜಿ ಸಂಭಾಷಣೆ ಬರೆದಿದ್ದಾರೆ.
ಐಹೊಳೆಯ ದೇವಸ್ಥಾನಗಳ ಇತಿಹಾಸ ಹೇಳಲು ಅಲ್ಲಿನ ಚಿಕ್ಕಮಕ್ಕಳು ಕನಸು ಕಂಡು ಅದಕ್ಕಾಗಿ ಪ್ರಯತ್ನ ಮಾಡುವ ವಾಸ್ತವಾಂಶದ ಪ್ರೇರಣೆಯಿಂದ ಕಥೆ ಹುಟ್ಟಿಕೊಡಿದ್ದು, ಅದು ಇಲ್ಲಿನ ಇತಿಹಾಸ ಸಾರುವ ಚಲನಚಿತ್ರವಾಗಿ ಮೂಡಿ ಬರುತ್ತಿದೆ ಎಂದು ನಿರ್ದೇಶಕ ರವೀಂದ್ರನಾಥ ಸಿರಿವರ ಹೇಳುತ್ತಾರೆ.
ತಾರಾಗಣದಲ್ಲಿ ರೇವಂತ್ ಮಾಳಿಗೆ, ಪ್ರಗತಿ, ಮಂಜು ಡ್ರಾಮಾ ಜೂನಿಯರ್ಸ್, ವೈದ್ಯನಾಥ ಬಿರದಾರ್, ಕಾವೇರಿ ಶ್ರೀಧರ್, ಅರ್ಚನ ರಾವ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಇದನ್ನೂ ಓದಿ:ನಿಖೀಲ್ ಕುಮಾರ್ ‘ರೈಡರ್’ ರಿಲೀಸ್ ದಿನಾಂಕ ಫಿಕ್ಸ್
ಚಿತ್ರಕೆ ನಿರ್ದೇಶಕ ರವೀಂದ್ರ ನಾಥ ಸಿರಿವರ ಅವರ ಜೊತೆಗೆ ಮನೋಜ್ ಕುಮಾರ್ ಜೋಸ್ಲೆ, ಮಂಜುನಾಥ್ ನೆಲಮಂಗಲ, ಅರ್ಚನ ರಾವ್, ಕಿಟ್ಟಿ ವೆಂಕಟೇಶ್, ಸವಿ ಶ್ರೀಧರ್ ಸೇರಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಹಂಸಲೇಖ ಅವರ ಸಂಗೀತವಿದೆ.