Advertisement

ಏಡ್ಸ್‌: ಡೇಟಾ ಸೋರಿಕೆ!

08:46 AM Jan 29, 2019 | |

ಸಿಂಗಾಪುರ: ಎಚ್‌ಐವಿ ಹೊಂದಿರುವ 14,200 ಜನರ ಗೌಪ್ಯ ಡೇಟಾ ಸಿಂಗಾಪುರದಲ್ಲಿ ಹ್ಯಾಕ್‌ ಆಗಿದ್ದು, ಆನ್‌ ಲೈನ್‌ನಲ್ಲಿ ಸೋರಿಕೆಯಾಗಿದೆ. ಕಳೆದ ಒಂದು ತಿಂಗಳಿನಲ್ಲೇ ಇದು ಎರಡನೇ ಡೇಟಾ ಸೋರಿಕೆಯಾಗಿದೆ.

Advertisement

ಇತ್ತೀಚೆಗೆಹಲವು ಅಪರಾಧ ಪ್ರಕರಣಗಳಲ್ಲಿ ಬಂಧಿಯಾಗಿರುವ ಅಮೆರಿಕದ ವ್ಯಕ್ತಿಯೊಬ್ಬ ಈ ಹ್ಯಾಕ್‌ ಮಾಡಿದ್ದಾನೆ ಎನ್ನಲಾಗಿದೆ. ಕಳೆದ ಜುಲೈನಲ್ಲಿ ಸಿಂಗಾಪುರ ಪ್ರಧಾನಿ ಲೀ ಸೀನ್‌ ಲೂಂಗ್‌ ಸೇರಿದಂತೆ ಕೋಟ್ಯಂತರ ನಾಗರಿಕರ ಆರೋಗ್ಯ ದತ್ತಾಂಶ ಸೋರಿಕೆಯಾಗಿತ್ತು. ಸದ್ಯ ಎಚ್‌ಐವಿ ಪೀಡಿತರ ವಿವರಗಳನ್ನು ಪ್ರಕಟಿಸಿದ ತಾಣವನ್ನು
ನಿರ್ಬಂಧಿಸಲಾಗಿದ್ದು, ಹ್ಯಾಕ್‌ ಮಾಡಿರುವ ವ್ಯಕ್ತಿಯು ಬೇರೆ ಮೂಲದಿಂದ ಪುನಃ ಬಹಿರಂಗಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next