Advertisement

ರಾಹುಲ್ ಮತ್ತೆ ಟ್ವೀಟ್ ಯಡವಟ್ಟು! ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಟೀಕೆ

02:29 PM Oct 30, 2018 | Sharanya Alva |

ನವದೆಹಲಿ: ಒಂದಲ್ಲ, ಒಂದು ಯಡವಟ್ಟು ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಮತ್ತೊಂದು ತಪ್ಪನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಒಳಗಾಗಿದ್ದಾರೆ. ಮಿಜೋರಾಂ ಯುವತಿಯರ ಸಾಧನೆಯನ್ನು ಅಭಿನಂದಿಸಿ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಈಗ ಟೀಕೆಗೆ ಒಳಗಾಗುವಂತೆ ಮಾಡಿದೆ.

Advertisement

ಟ್ವೀಟ್ ತಪ್ಪು!

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಟ್ವೀಟರ್ ಖಾತೆಯಲ್ಲಿ, ಮಣಿಪುರದ ಸೈನಿಕ್ ಶಾಲೆಯ ಬಾಲಕಿಯರ ಸಾಧನೆಗೆ ನನ್ನ ಅಭಿನಂದನೆಗಳು..ನಿಮ್ಮ ಸಾಧನೆ ಸ್ಫೂರ್ತಿದಾಯಕ, ನೀವು ಭಾರತದ ಭವಿಷ್ಯವಾಗಿದ್ದೀರಿ. ನಿಮ್ಮ ಸಾಧನೆ ಎಲ್ಲರಿಗೂ ಹೆಮ್ಮೆ ತರುವಂತಹದ್ದು ಎಂದು ಬರೆದುಕೊಂಡಿದ್ದರು.

ಆದರೆ ರಾಹುಲ್ ಗಾಂಧಿ ಅಭಿನಂದಿಸಿರುವ ಬಾಲಕಿಯರು ನಿಜಕ್ಕೂ ಮಣಿಪುರದವರಲ್ಲ, ಅವರು ಮಿಜೋರಾಂ ರಾಜ್ಯಕ್ಕೆ ಸೇರಿದವರು. ಭಾರತೀಯ ಜನತಾ ಪಕ್ಷ ಕೂಡಲೇ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿತ್ತು.

Advertisement

ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವಿಯ ಅವರು ರಾಹುಲ್ ಗಾಂಧಿಯ ತಪ್ಪನ್ನು ಪತ್ತೆ ಹಚ್ಚಿ, ಇದು ಈಶಾನ್ಯ ರಾಜ್ಯಗಳನ್ನು ರಾಹುಲ್ ಗಾಂಧಿ ನಿರ್ಲಕ್ಷಿಸಿದ್ದಕ್ಕೆ ಸಾಕ್ಷಿಯಾಗಿದೆ. ರಾಹುಲ್ ಗಾಂಧಿ ಮಿಜೋರಾಂ ರಾಜ್ಯಕ್ಕೆ ಸಂಬಂಧಪಟ್ಟ ಲೇಖನವನ್ನು ಟ್ವೀಟ್ ನಲ್ಲಿ ಶೇರ್ ಮಾಡಿ ಮಿಜೋರಾಂ ಅಂತ ಹೇಳುತ್ತಾರೆ! ಹೀಗಾಗಿ ರಾಹುಲ್ ಗಾಂಧಿ ಮಿಜೋರಾಂ ಮತ್ತು ಮಣಿಪುರ ಎರಡು ಪ್ರತ್ಯೇಕ ರಾಜ್ಯಗಳು ಎಂಬುದನ್ನು ತಿಳಿದುಕೊಂಡು ನೂರು ಬಾರಿ ಬರೆದು ಅಭ್ಯಾಸ ಮಾಡುವುದು ಒಳ್ಳೆಯದು ಎಂದು ಟಾಂಗ್ ನೀಡಿದ್ದಾರೆ.

ಟ್ವೀಟ್ ನಲ್ಲಾದ ತಪ್ಪಿನ ಅರಿವಾಗುತ್ತಿದ್ದಂತೆಯೇ ಕಾಂಗ್ರೆಸ್ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಈಗಾಗಲೇ ಅನೇಕ ಬಾರಿ ರಾಹುಲ್ ಇದೇ ರೀತಿ ತಮ್ಮ ಅಜ್ಞಾನ ಪ್ರದರ್ಶಿಸಿರುವುದಾಗಿ ಬಿಜೆಪಿ ವಾಗ್ದಾಳಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next