Advertisement

ಕಲಬುರಗಿ: ರಾಜ್ಯ ಸರ್ಕಾರದ ಬಜೆಟ್ ಅನುದಾನ ಹಾಗೂ ಆದಾಯ ನೋಡಿಕೊಂಡೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ಏನಾದರೂ ಹೇಳ್ತಾ ಹೋಗಲಿ  ಆದರೆ ತಾವು ಮಾಡಿ ತೋರಿಸುತ್ತೇವೆ. ಇದಕ್ಕೆ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಿದ್ದ ಆಶಾಶ್ವನೆಗಳನ್ನು ಸಾಕಾರಗೊಳಿಸಿದ್ದೇ ಸಾಕ್ಷಿ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋದಿ ಕೊಡುಗೆ ಏನು?:

ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋದಿ ಏನು ಕೊಡುಗೆ ನೀಡಿದ್ದಾರೆ. ಇದ್ದ ಯೋಜನೆಗಳು ಬೇರೆ ಕಡೆ ಹೋಗಿವೆ. ನಾವು ಮಂಜೂರು ಮಾಡಿದ್ದ ರೈಲುಗಳಿಗೆ ಬಣ್ಣ ಬಳೆದು ಹೊಸ ರೈಲು ಬಿಟ್ಟಿದ್ದಾರೆ. ಕೆಲವರಿಗೆ ಪ್ರಚಾರಬೇಕು. ಪ್ರಚಾರ ದಿಂದಲೇ ಎಲ್ಲ ಸಿಗುತ್ತೇ ಅಂದುಕೊಂಡಿದ್ದಾರೆ.‌ ಮುಂದಿನ ದಿನಗಳಲ್ಲಿ ಎಲ್ಲವೂ ತಿಳಿಯುತ್ತದೆ ಎಂದರು.

ಚುನಾವಣೆ ವಾರ್ ಇದ್ದಂತೆ, ಅವರು ಹಂಗ್ ಅಂದ್ರು, ಇವರು ಹಿಂಗ್ ಅಂದ್ರು ಅಂತ ಅಳುತ್ತಾ ಕೂತ್ಕುಕೊಳ್ಳದಲ್ಲ. ಮುಂಜಾನೆಯಿಂದ ಸಂಜೆವರೆಗೆ ಅಳುತ್ತಾ ಕೂರೋದು ಪ್ರಧಾನಿ ಕೆಲಸನಾ? ಎಂದು ಖರ್ಗೆ ಖಾರವಾಗಿ ಪ್ರಶ್ನಿಸಿದರು.

Advertisement

ಜನ ಭಾವನಾತ್ಮಕ ಬಲಿ ಬಿದ್ರೆ ಯಾವ ರಾಜ್ಯವು ಅಭಿವೃದ್ಧಿ ಯಾಗಲ್ಲ. ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಜನ ಅರಿತುಕೊಳ್ಳುವುದು ಮುಖ್ಯವಾಗಿದೆ ಎಂದು ಖರ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next