ಚೆನ್ನೈ: ತಮಿಳುನಾಡಿನ ಪ್ರಮುಖ ವಿಪಕ್ಷವಾಗಿರುವ ಆಲ್ ಇಂಡಿಯಾ ಅಣ್ಣಾ ಡಿಎಂಕೆಯ (ಎಐಎಡಿಎಂಕೆ) ಬೈ-ಲಾಗಳಿಗೆ ತಿದ್ದುಪಡಿ ತರಲಾಗಿದ್ದು, ಪಕ್ಷದ ಅಗ್ರ ನಾಯಕರನ್ನು ಅದೇ ಸ್ಥಾನಮಾನಗಳಲ್ಲಿ ಮುಂದುವರಿಸುವಂತೆ ಮಾಡುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಯನ್ನು ಅಳವಡಿಸಿ ಕೊಳ್ಳಲಾಗಿದೆ.
ಈ ಮೂಲಕ, ಇಂದಲ್ಲ ನಾಳೆ, ಎಐಎಂಡಿಕೆಗೆ ಮರಳುವ ವಿಶ್ವಾಸ ಹೊಂದಿದ್ದ ಪಕ್ಷದ ಮಾಜಿ ನಾಯಕಿ ವಿ. ಶಶಿಕಲಾ ಅವರಿಗೆ ಪಕ್ಷದ ಬಾಗಿಲನ್ನು ಸಂಪೂರ್ಣ ವಾಗಿ ಬಂದ್ ಮಾಡಲಾಗಿದೆ.
ಚೆನ್ನೈಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಈ ತಿದ್ದುಪಡಿ ಮಾಡಲಾಗಿದ್ದು, ಅದರ ಅನುಸಾರ ಪಕ್ಷದ ಸಾಮಾನ್ಯ ಸದಸ್ಯರಿಗೆ ಪಕ್ಷದ ಅಗ್ರಗಣ್ಯ ನಾಯಕರನ್ನು ಚುನಾವಣೆಯ ಮೂಲಕ ಆರಿಸುವ ಅವಕಾಶ ಕಲ್ಪಿಸಲಾಗಿದೆ. ಸದ್ಯಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಒ. ಪನ್ನೀರ್ ಸೆಲ್ವಂ ಹಾಗೂ ಕೆ. ಪಳನಿ ಸ್ವಾಮಿ ಅವರು ಪಕ್ಷದ ಅಗ್ರಗಣ್ಯ ನಾಯಕರಾಗಿದ್ದಾರೆ. ಇವರನ್ನು ಪಕ್ಷದ ಪ್ರಾಥಮಿಕ ಸದಸ್ಯರೇ ಮತ್ತೊಮ್ಮೆ ಮಗದೊಮ್ಮೆ ನಾಯಕ ರನ್ನಾಗಿ ಆರಿಸುವ ವ್ಯವಸ್ಥೆಯನ್ನು ತಿದ್ದುಪಡಿ ಮೂಲಕ ಜಾರಿಗೆ ತರಲಾಗಿದೆ.
ಇದನ್ನೂ ಓದಿ:ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು
ಹಾಗಾಗಿ, ಇತ್ತೀಚೆಗೆ ಪುನಃ ಪಕ್ಷದ ನಾಯಕಿಯಾಗಿ ಮರಳುವುದಾಗಿ ಘೋಷಿ ಸಿಕೊಂಡಿದ್ದ ಶಶಿಕಲಾ ಅವರಿಗೆ ತೀವ್ರ ಹಿನ್ನಡೆಯನ್ನು ಉಂಟು ಮಾಡಲಾಗಿದೆ.