ಅಹಮದಾಬಾದ್: ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಓರಿಯೊ ಮ್ಯಾಗಿಯ ವಿಡಿಯೋ ನಿಮಗೆ ನೆನಪಿದೆಯೇ? ಈಗ ಅಷ್ಟೇ ವಿಲಕ್ಷಣವಾದ ಆಹಾರದ ಕಾಂಬಿನೇಶನೊಂದು ಮಾರುಕಟ್ಟೆಗೆ ಬಂದಿದೆ. ವ್ಯಕ್ತಿಯೊಬ್ಬರು ಓರಿಯೊ ಪಕೋಡಾ ತಯಾರಿಸುತ್ತಿರುವ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಫೂಡೀ ಇನ್ಕಾರ್ನೇಟ್ ಎಂಬ ಚಾನೆಲ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿಲಾಗಿದ್ದು, ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ನಮಗೆ ಇದು ವಿಚಿತ್ರ ಅನಿಸಿದರೂ, ಈ ತಿಂಡಿ ಇತ್ತೀಚಿನದಲ್ಲ, ಕಳೆದ 15-20 ವರ್ಷಗಳಿಂದ ವಿಶೇಷವಾಗಿ ಯುವ ಜನಸಂಖ್ಯೆಯಲ್ಲಿ ಪ್ರಸಿದ್ಧವಾಗಿದೆ ಎಂದು ಬ್ಲಾಗರ್ ಅಮರ್ ಸಿರೋಹಿ ಹೇಳುತ್ತಾರೆ.
ಇದನ್ನೂ ಓದಿ:ಸದಾ ನೆನಪಿನಲ್ಲಿ ಉಳಿಯುವಂತಾದ ಪುನೀತ್ ಜೋಯಿಡಾ ಭೇಟಿ
ಈ ತಿಂಡಿಯನ್ನು ತಯಾರಿಸಲು ಬೀದಿ ಬದಿ ಸ್ಟಾಲ್ ನ ವ್ಯಾಪಾರಿ ಕಡಲೆ ಹಿಟ್ಟಿಗೆ ಉಪ್ಪು, ನೀರು ಸೇರಿಸಿ ದಪ್ಪವಾದ ಹಿಟ್ಟನ್ನು ತಯಾರಿಸಿದರು. ಅವರು ಓರಿಯೊಸ್ ಪ್ಯಾಕೆಟ್ ಅನ್ನು ಹಾಕಿದರು. ಓರಿಯೋ ಬಿಸ್ಕತ್ತುಗಳಿಗೆ ಕಡಲೆ ಹಿಟ್ಟನ್ನು ಲೇಪಿಸಿದರು.ನಂತರ ಅವುಗಳನ್ನು ಬಿಸಿ ಎಣ್ಣೆಯಲ್ಲಿ ಗೋಲ್ಡನ್-ಬ್ರೌನ್ ಆಗುವ ತನಕ ಹುರಿದರು.
ವ್ಯಾಪಾರಿಯು ಓರಿಯೊ ಪಕೋಡಾವನ್ನು ಕರಿದ ಹಸಿರು ಮೆಣಸಿನಕಾಯಿಗಳು ಮತ್ತು ವಿಶೇಷ ಖರ್ಜೂರದ ಚಟ್ನಿಯೊಂದಿಗೆ ತಿನ್ನಲು ನೀಡುತ್ತಾರೆ. ಇದರ ಬೆಲೆ 100 ಗ್ರಾಂಗೆ 20 ರೂ.