ಅಹ್ಮದಾಬಾದ್: ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಬಡಿಸಿದ ಸಾಂಬಾರ್ ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದ್ದು ಇದೀಗ ಮುನ್ಸಿಪಾಲಿಟಿ ಅಧಿಕಾರಿಗಳು ರೆಸ್ಟೋರೆಂಟ್ ಗೆ ಬೀಗ ಜಡಿದಿದ್ದಾರೆ.
ಘಟನೆ ಜೂನ್ 20 ರಂದು ಅಹ್ಮದಾಬಾದ್‌ನಲ್ಲಿ ನಡೆದಿದ್ದು ಅವಿನಾಶ್ ಎಂಬ ವ್ಯಕ್ತಿ ತನ್ನ ಪತ್ನಿಯ ಜೊತೆ ದೇವಿ ದೋಸೆ ಪ್ಯಾಲೇಸ್ ಗೆ ದೋಸೆ ತಿನ್ನಲು ತೆರಳಿದ್ದಾರೆ ಈ ವೇಳೆ ರೆಸ್ಟೋರೆಂಟ್ ಸಿಬಂದಿ ದೋಸೆ ಬರುವ ಮೊದಲೇ ಚಟ್ನಿ ಹಾಗೂ ಸಾಂಬಾರ್ ನೀಡಿದ್ದಾರೆ, ಅವಿನಾಶ್ ಸಾಂಬಾರ್ ತಿನ್ನುತ್ತಿದ್ದಾಗ ಅದರಲ್ಲಿ “ಸತ್ತ ಇಲಿ” ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಕೂಡಲೇ ಅವಿನಾಶ್ ರೆಸ್ಟೋರೆಂಟ್ ಸಿಬ್ಬಂದಿಯನ್ನು ಕರೆಸಿ ಸಾಂಬಾರ್ ನಲ್ಲಿ ಸತ್ತ ಇಲಿ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ ಜೊತೆಗೆ ಅಹ್ಮದಾಬಾದ್ ನಲ್ಲಿರುವ ಪುರಸಭೆಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ದೂರು ಆಧರಿಸಿ ರೆಸ್ಟೊರೆಂಟ್ ಅನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅಡುಗೆಕೋಣೆ ತೆರೆದ ಪ್ರದೇಶದಲ್ಲಿರುವುದರಿಂದ ಅಡುಗೆಕೋಣೆಗಳಿಗೆ ಜೀವಿಗಳು ಅಥವಾ ಕೀಟಗಳು ಸೇರಿಕೊಳ್ಳುವ ಸಾಧ್ಯತೆ ಇದೆ ಹೋಟೆಲ್ ಮಾಲೀಕರು ನೈರ್ಮಲ್ಯಕ್ಕೆ ಹೆಚ್ಚಿನ ಗಮನಕೊಡದಿರುವ ನಿಟ್ಟಿನಲ್ಲಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿದ ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಆಹಾರ ಸುರಕ್ಷತಾ ಅಧಿಕಾರಿ ಭವಿನ್ ಜೋಶಿ ರೆಸ್ಟೋರೆಂಟ್ ನಲ್ಲಿ ಸತ್ತ ಇಲಿ ಪತ್ತೆಯಾಗಿರುವುದು ನಿಜ ಹಾಗಾಗಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿದ್ದೇವೆ ಮುಂದಿನ ಸೂಚನೆ ಬರುವವರೆಗೂ ಹೋಟೆಲ್ ಮುಚ್ಚಿರುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಚಾಕೊಲೇಟ್ ಸಿರಪ್ ನಲ್ಲಿ ಸತ್ತ ಇಲಿ ಪತ್ತೆಯಾಗಿರುವುದು, ಚಿಪ್ಸ್ ಪ್ಯಾಕೆಟ್ ನಲ್ಲಿ ಸತ್ತ ಕಪ್ಪೆ, ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆಯಾಗಿರುವುದು ಇನ್ನೂ ಹಲವು ಹಾಗಾಗಿ ಗ್ರಾಹಕರು ಹೊರಗಿನ ತಿಂಡಿ ತಿನ್ನುವಾಗ ಅಗತ್ಯವಾಗಿ ಎಚ್ಚರ ವಹಿಸಬೇಕು.
ಇದನ್ನೂ ಓದಿ: Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ