Advertisement

ಡಿಎಂಕೆ ಅಧಿಕಾರ ಸಮರ ಆರಂಭ

06:00 AM Aug 14, 2018 | |

ಚೆನ್ನೈ: ಡಿಎಂಕೆ ಪರಮೋಚ್ಚ ನಾಯಕ ಎಂ.ಕರುಣಾನಿಧಿ ನಿಧನದ ಬಳಿಕ ಪಕ್ಷದಲ್ಲಿ ಉತ್ತರಾಧಿಕಾರ ಕಲಹ ಭುಗಿಲೇಳಬಹುದು ಎಂಬ ನಿರೀಕ್ಷೆ ಎಲ್ಲೆಡೆಯೂ ಇತ್ತು. ಅದಕ್ಕೆ ಪೂರಕವಾಗಿ ಮಾಜಿ ಸಚಿವ ಎಂ.ಕೆ.ಅಳಗಿರಿ ಕರುಣಾನಿಧಿ ಬೆಂಬಲಿಗರೆಲ್ಲರೂ ತಮ್ಮ ಜತೆ ಇದ್ದಾರೆ ಎಂದು ಹೇಳಿದ್ದಾರೆ. ಡಿಎಂಕೆ ಅಧ್ಯಕ್ಷರನ್ನಾಗಿ ಎಂ.ಕೆ.ಸ್ಟಾಲಿನ್‌ರನ್ನು ಆಯ್ಕೆ ಮಾಡಲು ಪ್ರಮುಖ ಸಭೆ ಮಂಗಳವಾರ ನಡೆಯಲಿರುವಂತೆಯೇ ಅಳಗಿರಿ ಮರೀನಾ ಬೀಚ್‌ನಲ್ಲಿರುವ ತಂದೆ ಸಮಾಧಿಗೆ ಗೌರವ ಅರ್ಪಿಸಿದ್ದಾರೆ. “ನನ್ನ ನೋವನ್ನು ತಂದೆಗೆ ತಿಳಿಯಪಡಿಸಿದ್ದೇನೆ. ಕರುಣಾನಿಧಿಯವರ ಬೆಂಬಲಿಗರು ನನ್ನ ಜತೆಗಿದ್ದಾರೆ’ ಎಂದು ಅಳಗಿರಿ ತಿಳಿಸಿದ್ದಾರೆ.

Advertisement

ಇದೇ ವೇಳೆ ಅಳಗಿರಿ ಅವರ ಉಚ್ಚಾಟನೆ ಆದೇಶ ಹಿಂಪಡೆದುಕೊಳ್ಳಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ. ಪುತ್ರ ದಯಾನಿಧಿ ಅಳಗಿರಿಗೆ ಡಿಎಂಕೆ ಟ್ರಸ್ಟ್‌ ಮತ್ತು ಮುರಸೋಳಿ ಟ್ರಸ್ಟ್‌ನಲ್ಲಿ ಸ್ಥಾನ ಒದಗಿಸಬೇಕು ಎಂದು ಎಂ.ಕೆ.ಅಳಗಿರಿ ಮನ ವಿ ಮಾಡಿದ್ದಾರೆ. ಜತೆಗೆ ತಮ್ಮನ್ನು ಮ ತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕುಟುಂ ಬ ಸದಸ್ಯರ ಮೂಲಕ ಪ್ರಯತ್ನ ನಡೆಸಿದ್ದಾರೆ. ಆದರೆ ಅವರನ್ನು ಮತ್ತೆ ಡಿಎಂಕೆಗೆ ಸೇರಿಸಿಕೊಳ್ಳಲು ಸ್ಟಾಲಿನ್‌ ಯಾವುದೇ ರೀತಿಯಲ್ಲಿ ಮುಕ್ತ ಮನಸ್ಸು ಮಾಡಿಲ್ಲ. 

ಹಕ್ಕು ಇಲ್ಲ: ಅಳಗಿರಿ ಹೇಳಿಕೆಗೆ ಆಕ್ಷೇಪ ಮಾಡಿರುವ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಅನºಳಗನ್‌ “ಸ್ಟಾಲಿನ್‌ ಬಗ್ಗೆ ಮಾತನಾಡಲು ಅಳಗಿರಿ ಅವರಿಗೆ ಹಕ್ಕಿಲ್ಲ. ಏಕೆಂ ದರೆ ಅವರು ಈಗ ಡಿಎಂಕೆಯ ಭಾಗವೇ ಅಲ್ಲ. ಕೇವಲ ಹೊಟ್ಟೆಕಿಚ್ಚಿನಿಂದ ಸ್ಟಾಲಿನ್‌ ವಿರುದ್ಧ ಮಾತುಗಳನ್ನಾಡುತ್ತಿದ್ದಾರೆ. ಕರುಣಾನಿಧಿ ಅವರನ್ನೇ ಅಳಗಿರಿ ಬಹಿರಂಗವಾಗಿ ಟೀಕಿಸಿದ್ದರು’ ಎಂದು ಹೇಳಿದ್ದಾರೆ.

ವಜಾಗೊಂಡಿದ್ದರು: ಸ್ಟಾಲಿನ್‌ ಮತ್ತು ಅಳಗಿರಿ ನಡುವೆ ಡಿಎಂಕೆಯನ್ನು ಯಾರು ನಿಯಂತ್ರಿಸಬೇಕು ಎಂಬ ಬಗ್ಗೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. 2014ರ ಜನವರಿಯಲ್ಲಿ ಅಳಗಿರಿ ಅವರನ್ನು ವಜಾ ಮಾಡುವುದಕ್ಕಿಂತ ಮೊದಲು 3 ತಿಂಗಳಲ್ಲಿ ಸ್ಟಾಲಿನ್‌ ಅಸುನೀಗಲಿದ್ದಾರೆ ಎಂದು ಅಳಗಿರಿ ಹೇಳಿದ್ದಾರೆ ಎಂದು ವರದಿ ಯಾಗಿತ್ತು. ಆ ರೀತಿ ಹೇಳಿಯೇ ಇಲ್ಲ ಎಂದು ಅಳಗಿರಿ ವಾದಿಸಿದ್ದರು.

ಡಿಎಂಕೆಯನ್ನು ಮಠ ಎಂದು ಹೇಳಿದ ಬಳಿಕ ಅಳಗಿರಿ ಅವರನ್ನು ಕರುಣಾನಿಧಿ ಉಚ್ಚಾಟಿಸಿದ್ದರು. ಆರ್‌.ಕೆ.ನಗರ ಕ್ಷೇತ್ರದಲ್ಲಿ ಟಿ.ಟಿ.ವಿ.ದಿನಕರನ್‌ ಗೆದ್ದಾಗ ಸ್ಟಾಲಿನ್‌ ನೇತೃತ್ವದಲ್ಲಿ ಡಿಎಂಕೆ ಯಾವುದೇ ಚುನಾವಣೆ ಗೆಲ್ಲುವುದಿಲ್ಲ ಎಂದಿದ್ದರು. 2014ರ ಬಳಿಕ ಅಳಗಿರಿ ಯಾವುದೇ ರೀತಿಯಲ್ಲಿ ಸುದ್ದಿಯಲ್ಲಿರಲಿಲ್ಲ. ಕರುಣಾನಿಧಿ ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಬಹಳ ಚುರುಕಾಗಿ ಓಡಾಟ ನಡೆಸಿದ್ದಾರೆ. 

Advertisement

ಮದುರೆಯಲ್ಲಿರುವ ಜನರು ಅಳಗಿರಿ ಅವರನ್ನು ನೋಡಿ ದರೆ ಹೆದರುತ್ತಿದ್ದಾರೆ. ಅವರೊಬ್ಬ ಭೂಕಳ್ಳ. ಸ್ಟಾಲಿನ್‌ ಸಂಘಟನಾತ್ಮಕ ವಾಗಿ ಕೆಲಸ ಮಾಡುತ್ತಾರೆ. ಅವರಿ ಬ್ಬರ ಜಗಳದಲ್ಲಿ ಬಿಜೆಪಿ ಪಾಲಿಲ್ಲ.
ಡಾ.ಸುಬ್ರಹ್ಮಣ್ಯನ್‌  ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next