ನವ ದೆಹಲಿ : ಹಬ್ಬಗಳ ಸೀಸನ್ ಬರುತ್ತಿದ್ದಂತೆ ಹೆಚ್ಚಿನವರು ತಾನೊಂದು ಹೊಸ ಬೈಕ್ ತೆಗೆದುಕೊಳ್ಳಬೇಕು ಎಂದು ಬಯಸುವುದು ಸಹಜ. ಈ ಸಂದರ್ಭದಲ್ಲಿ ಹೆಚ್ಚಿನವರು ಆಫರ್ ಗಳಿಗಾಗಿ ಕಾಯುತ್ತಾರೆ.
ಹೌದು, ಹಬ್ಬಗಳು ಬರುವ ತಿಂಗಳಿಂದ ಸಾಲು ಸಾಲಾಗಿ ಬರುತ್ತಿವೆ ಈ ಸುಸಂದರ್ಭದಲ್ಲಿ, ಬಜಾಜ್, ರಾಯಲ್ ಎನ್‌ಫೀಲ್ಡ್ ನಂತಹ ದೈತ್ಯ ವಾಹನ ತಯಾರಕ ಸಂಸ್ಥೆಗಳು ಹಬ್ಬದ ಸೀಸನ್‌ಗೆ ಮುಂಚಿತವಾಗಿ ಬೈಕ್ ಗಳ ಮೇಲೆ ಭರ್ಜರಿ ರಿಯಾಯತಿ ಘೋಷಿಸಿವೆ.
ಇದನ್ನೂ ಓದಿ : ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಆಡುವುದು ಅನುಮಾನ
ಮಾತ್ರವಲ್ಲದೇ ಈ ಎಲ್ಲಾ ಆಟೋ ಮೊಬೈಲ್ ದೈತ್ಯ ಸಂಸ್ತೆಗಳು ಹೊಸ ಹೊಸ ದೊಡ್ಡ ಬೈಕ್ ಗಳ ಬಿಡುಗಡೆಗೆ ಸಿದ್ಧವಾಗಿವೆ. ಯಮಹಾ, ಕೆಟಿಎಂ ಮತ್ತು ಹೀರೋ ಮೋಟೋಕಾರ್ಪ್ ನಂತಹ ಮೋಟಾರ್ ಸೈಕಲ್ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ದೊಡ್ಡ ಪ್ರಮಾಣದ ರಿಯಾಯತಿ ದರದಲ್ಲಿ ಬೈಕ್ ಗಳನ್ನು ನೀಡುತ್ತಿವೆ. ಆ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ದೇಶದ ದೈತ್ಯ ಆಟೋ ಮೊಬೈಲ್ ಸಂಸ್ಥೆಗಳಲ್ಲಿ ಒಂದಾದ ಯಮಹಾ ಸಂಸ್ಥೆ ಗ್ರಾಹಕರಿಗೆ ವಿಶೇಷ ಹಬ್ಬದ ರಿಯಾಯತಿ ಘೋಷಿಸಿದ್ದು, Yamaha Ray 2R 125Fi, Fascion 125Fi ಹಾಗೂ RayZR Street Rally ಆಕರ್ಷಕ ಬೈಕ್ ಗಳನ್ನು ಕಾಯ್ದಿರಿಸುವವರಿಗೆ ರಿಯಾಯತಿ ಘೋಷಣೆ ಪ್ರಕಟಿಸಿದೆ. ಯಮಹಾ ಸ್ಕ್ರಾಚ್ ಅಂಡ್ ವಿನ್ ಆಫರ್ ನೀಡುತ್ತಿದ್ದು, ಗ್ರಾಹಕರು 2,999 ರೂ. ಮೌಲ್ಯದ ಖಚಿತ ಉಡುಗೊರೆ ಹಾಗೂ 1 ಲಕ್ಷ ರೂ.ವರೆಗಿನ ಬಂಪರ್ ಬಹುಮಾನ ನೀಡುತ್ತಿರುವುದು ವಿಶೇಷ.
ಬಜಾಜ್ ಸಹಭಾಗಿತ್ವದಲ್ಲಿ ಕೆಟಿಎಂ ಇಂಡಿಯಾ ದೇಶದಲ್ಲಿ ತನ್ನ 10ನೇ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸುತ್ತಿದೆ. ಶೇ.50ರಷ್ಟು ರಿಯಾಯಿತಿಯನ್ನು ಗ್ರಾಹಕರು ಕೆಟಿಎಂ Pro-Experiences ಬೈಕ್ ಮೇಲೆ ಪಡೆದುಕೊಳ್ಳಬಹುದಾಗಿದೆ
ಇನ್ನು, ಕವಾಸಕಿ ಇಂಡಿಯಾ ಸಂಸ್ಥೆ ತನ್ನ KLX 110, KLX 140, ಹಾಗೂ KX 100 ರೇಸಿಂಗ್ ಬೈಕ್ ಗಳ ಮೇಲೆ ಆಫ್-ರೋಡ್ ವೋಚರ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. 2021 ರ ಆಗಸ್ಟ್ 31 ರವರೆಗೆ ಈ ರಿಯಾಯಿತಿ ಮಾತ್ರ ಲಭ್ಯವಿರಲಿದ್ದು, ಗ್ರಾಹಕರು 50 ಸಾವಿರ ರೂ.ವರೆಗೆ ಉಳಿತಾಯ ಮಾಡಬಹುದಾಗಿದೆ.
ಇದನ್ನೂ ಓದಿ : ಸರಕಾರದ ಸೇವೆಗಳಲ್ಲಿ ತಾರತಮ್ಯ : ರಮಾನಾಥ ರೈ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ