ಮೈಸೂರು: ನಮ್ಮ ದೇಶ ಕೃಷ ಆಧಾರಿತ ಕ್ಷೇತ್ರ.ನಮ್ಮ ದೇಶದಲ್ಲಿ 90ರಷ್ಟು ಸಣ್ಣ ಹಾಗೂ ಮಧ್ಯಮ ಕೃಷಿಕರಿದ್ದಾರೆ.ಇಡೀ ದೇಶದಲ್ಲಿ ನಗರಕ್ಕೆ ಹತ್ತಿರವಿರುವ ಭೂಮಿ ಸೈಟ್ ಗಳಾಗುತ್ತಿದೆ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರದ್ಲಾಂಜೆ ಆತಂಕ ವ್ಯಕ್ತ ಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ ಹಾಗೂ ಮಧ್ಯಮ ಕೃಷಿಕರನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಂಘಗಳನ್ನ ಮಾಡಿದೆ.ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ಹಣವನ್ನ ರೈತರಿಗೆ ನೇರವಾಗಿ ಅವರ ಅಕೌಂಟ್ ಗೆ ಹಾಕುತ್ತಿದೆ. ಹಿಂದೆ ಎತ್ತಿನ ಜೋಡಿ ಹಾಗೂ ಕೋಣದ ಜೋಡಿ ನೋಡುತ್ತಿದ್ಧೇವು .ಇಂದು ಎತ್ತುಗಳನ್ನ ಸಾಕಲು ಕಷ್ಟವಾಗುತ್ತಿದೆ ಎಂದರು.
ಗುಣಮಟ್ಟಕ್ಕೆ ಬೀಜ ನೀಡಲು ವಿಶೇಷ ಕಾನೂನು ತರುತ್ತಿದ್ದೇವೆ. ಪೋಟಾಶ್ ಪ್ರತಿ ವರ್ಷ ಕಡಿಮೆ ಸಿಗುತ್ತದೆ. ಕೊರೊನ ಕಾರಣದಿಂದ ಪೋಟಾಶ್ ಈ ವರ್ಷ ಕಡಿಮೆ ಸಿಕ್ಕಿದೆ. ನಮ್ಮ ಗುರಿ ಮುಂದಿನ ಎರಡು ವರ್ಷಗಳಲ್ಲಿ ರಸಗೊಬ್ಬರದಲ್ಲಿ ಸ್ವಾವಲಂಭಿಯಗುವುದು. ಅತಿ ಹೆಚ್ಚು ಹಣ್ಣು ತರಕಾರಿಗಳನ್ನ ಬೆಳೆಯುತ್ತಿದ್ದೇವೆ. ಭಾರತದ ಕನಸು ಕೃಷಿ ಉತ್ಪನ್ನಗಳ ದೇಶಗಳ ಪೈಕಿ ನಮ್ಮ 10 ಸ್ಥಾನದೊಳಗೆ ಬರಬೇಕು. ಈ ಭಾರಿ 9ನೇ ಸ್ಥಾನಕ್ಕೆ ಬಂದು ನಿಲ್ಲುವ ವಿಶ್ವಾಸವಿದೆ.ಕೃಷಿ ಪಾಲು ಜಿ.ಡಿ.ಪಿಯಲ್ಲಿ ಶೇ 22.5 ರಷ್ಟಿದೆ. ಕೊರೊನ ಸಂಕಷ್ಟ ಕಾಲದಲ್ಲಿ ಬೇರೆ ದೇಶಗಳಿಗೆ ಆಹಾರವನ್ನ ರಫ್ತು ಮಾಡಿದೆ.ಕಳೆದ ವರ್ಷ ಉತ್ತರಖಾಂಡ ರಾಜ್ಯ ಸಿರಿಧಾನ್ಯವನ್ನ ಅತಿ ಹೆಚ್ಚಾಗಿ ರಫ್ತು ಮಾಡಿದೆ. ನಮ್ಮ ಉದ್ದೇಶ ಕೇವಲ ಕೃಷಿ ಮಾಡುವುದನ್ನ ಅದನ್ನ ಮಾರಾಟ ಮಾಡುವುದನ್ನ ಕಲಿಸುವುದು ನಮ್ಮ ಉದ್ದೇಶ ಎಂದರು.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಏಷ್ಯಾದ ಅತಿ ದೊಡ್ಡ ಭಗವದ್ಗೀತಾ ಜ್ಞಾನಲೋಕ ಅನಾವರಣ
ಸೂರ್ಯಕಾಂತಿಯೂ ಇಲ್ಲ, ಕಡಲೆ ಬೀಜವೂ ಇಲ್ಲ !
ನೀವು ತಿನ್ನುತ್ತಿರುವ ಸೂರ್ಯಕಾಂತಿ, ಕಡಲೆಕಾಯಿ ಎಣ್ಣೆಯಲ್ಲಿ ಸೂರ್ಯಕಾಂತಿಯೂ ಇಲ್ಲ, ಕಡಲೆ ಬೀಜವೂ ಇಲ್ಲ.ಅಡುಗೆ ತೈಲದ ವಿಚಾರದಲ್ಲಿ ಭಾರತ ಸ್ವಾವಲಂಬಿ ಆಗಬೇಕಿದೆ. ಶೇಕಡ 70ರಷ್ಟು ಎಣ್ಣೆ ವಿದೇಶದಿಂದ ಆಮದಾಗುತ್ತದೆ. ಮಲೇಷಿಯಾ ಹಾಗೂ ಇಂಡೋನೇಷ್ಯಾದಿಂದ ಫಾಮ್ ಆಯಿಲ್ ಬರುತ್ತದೆ. ಅದನ್ನ ಭಾರತದಲ್ಲಿ ರಿಫೈನರಿ ಮಾಡಿ ಬೇರೆ ಬೇರೆ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ತೈಲ ಬೆಳೆಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಖಾದ್ಯ ತೈಲದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಇದೆ ಎಂದರು.