Advertisement
ಕಳೆದ ವರ್ಷ ಮಳೆ ಉತ್ತಮವಾಗಿ ಬೀಳದೆ ರೈತರು ತಮ್ಮ ಜಮೀನಿನಲ್ಲಿ ಬಿತ್ತಿದ್ದ ಬೆಳೆಗಳು ಬತ್ತಿಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿ, ಜಾನುವಾರುಗಳಿಗೆ ಮೇವಿಲ್ಲದೆ ತತ್ತರಿಸುವಂತಹ ಪರಿಸ್ಥಿತಿ ಬಂದೊದ ಗಿತು. ಇಂತಹ ಸಂದರ್ಭದಲ್ಲಿ ಈ ವರ್ಷ ತಾಲೂಕಾದ್ಯಂತ ಅತ್ಯುತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ಪುರ್ನಜೀವ ನೀಡಿದೆ.
Related Articles
Advertisement
ಏಪ್ರಿಲ್ ಅಂತ್ಯದ ವೇಳೆಗೆ 55.55 ಮಿ.ಮೀ.ಮಳೆಯಾಗಬೇಕಿತ್ತು ಹಾಗಾಗಿ ಈ ಬಾರಿ ಏಪ್ರಿಲ್ ತಿಂಗಳು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ತಾಲೂಕಿನ ಪ್ರಮುಖ ಬೆಳೆಯಾದ ತಂಬಾಕನ್ನು ತಾಲೂಕಿನ ಅತಿ ಹೆಚ್ಚು ರೈತರು ಅವಲಂಭಿಸಿದ್ದು, ನಂತರ ಮೆಕ್ಕೆಜೋಳ, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ.
ಒಂದು ಅಂದಾಜಿನ ಪ್ರಕಾರ ತಾಲೂಕಿನಲ್ಲಿ ಬೆಳೆಯುವ ತಂಬಾಕು ಬೆಳೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೂರಾರು ಕೋಟಿ ರೂ. ವಿದೇಶಿ ವಿನಿಮಯ ಬರುತ್ತದೆ. ಇದೆಲ್ಲದರ ಮಧ್ಯೆ ಈ ಬಾರಿ ಉತ್ತಮ ಮುಂಗಾರು ಆರಂಭಗೊಂಡಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ. ತಾಲೂಕಿನ 4 ಪ್ರಮುಖ ಹೋಬಳಿಗಳಾದ ರಾವಂದೂರು, ಬೆಟ್ಟದಪುರ, ಹಾರನಹಳ್ಳಿ, ಕಸಬಾ ಹಾಗೂ ಪಟ್ಟಣ ಸೇರಿದಂತೆ ಎಲ್ಲಾ ಕಡೆ ರೈತರು ಹೆಚ್ಚು ಕೃಷಿ ಚಟುವಟಿಕೆಯಲ್ಲಿ ತೊಡಗುವಂತಾಗಿದೆ.
* ರಾ.ಶ.ವೀರೇಶ್‌ಕುಮಾರ್