ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ವಿದ್ಯಾಗಿರಿಗೆ ಆಗಮಿಸಿದರು. ಸಾಹಿತ್ಯ ಸಮ್ಮೇಳನ ವೇದಿಕೆಗೆ ಹೋಗುವುದಕ್ಕೂ ಮೊದಲು ನೇರವಾಗಿ ಕೃಷಿ ಸಿರಿಗೆ ಭೇಟಿ ನೀಡಿದರು.
Advertisement
ಅಲ್ಲಿನ ಫಲ ಪುಷ್ಪ ಹಾಗೂ ವಿವಿಧ ತಳಿಯ ತರಕಾರಿ/ ಹಣ್ಣಿನ ಬೀಜಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಭತ್ತದಿಂದ ಮಾಡಿದ ವಿಶೇಷ ಉತ್ಪನ್ನವೊಂದನ್ನು ಡಾ| ಹೆಗ್ಗಡೆ ಅವರಿಗೆ ಕೃಷಿಕರೊಬ್ಬರು ಪ್ರದಾನಿಸಿದರು. “ನಮ್ಮ ಅನ್ನದಾತರು ನೀವು’ ಎಂದು ಕೃಷಿಕರೊಬ್ಬರು ಡಾ| ಹೆಗ್ಗಡೆ ಅವರನ್ನು ಉಲ್ಲೇಖೀಸಿದರು. ಆ ಬಳಿಕ ತರಕಾರಿ ತೋಟ ವನ್ನು ವೀಕ್ಷಿಸಿದ ಹೆಗ್ಗಡೆ ಅವರು, ಡಾ| ಮೋಹನ್ ಆಳ್ವ ಅವರ ಕಾರ್ಯಕ್ಷಮ ತೆಯನ್ನು ಶ್ಲಾಘಿಸಿ, ನುಡಿಸಿರಿಗೆ ಕೃಷಿಸಿರಿಯ ಮೂಲಕ ಪರಿಪೂರ್ಣತೆ ದೊರೆಯಿತು ಎಂದು ಉದ್ಗರಿಸಿದರು. ಬಳಿಕ ಕೃಷಿಸಿರಿ ನಡೆಯುವಲ್ಲಿ ಸಿದ್ಧ ಪಡಿಸಲಾದ ಭೋಜನ ವ್ಯವಸ್ಥೆಯನ್ನು ವೀಕ್ಷಿಸಿದರು. ನುಡಿ ಸಿರಿಯ ಮುಖ್ಯವೇದಿಕೆಯ ಹತ್ತಿರದಲ್ಲಿ ಪುಸ್ತಕ ಮೇಳ, ಗಾಳಿಪಟ ವೀಕ್ಷಿಸಿದರು.