ಹುಣಸೂರು: ತಾಲೂಕಿನ ರೈತನ ಪುತ್ರಿ ಯೊಬ್ಬರು ಕೃಷಿ ಕ್ಷೇತ್ರದ ಕೃಷಿ ಸಂಶೋಧನಾ ವಿಜ್ಞಾನಿ (ಎಆರ್‌ಎಸ್) ಅತ್ಯುನ್ನತ ಹುದ್ದೆಗೆ ನಡೆದ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಕೃಷಿ ವಿಸ್ತರಣಾ ವಿಭಾಗದಲ್ಲಿ ಮೂರನೇ ರ್‍ಯಾಂಕ್ ಪಡೆದಿದ್ದಾರೆ.
ತಾಲೂಕಿನ ಹನಗೋಡು ಹೋಬಳಿಯ ಹಬ್ಬನಕುಪ್ಪೆ ಗ್ರಾಮದ ರೈತ ರಾಜೇಗೌಡ -ಲಲಿತಮ್ಮ ದಂಪತಿ ಪುತ್ರಿ ಎಚ್.ಆರ್.ರಮ್ಯಾ ಸಾಧನೆಗೈದ ಯುವತಿ.
ಈ ಹುದ್ದೆ ಐಎಎಸ್‌ಗೆ ಸರಿಸಮಾನ ವಾಗಿದ್ದು, ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಕೃಷಿ ವಿಸ್ತರಣಾ ವಿಭಾಗದಲ್ಲಿನ ಆರು ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಎಚ್.ಆರ್.ರಮ್ಯಾ ಮೂರನೇ ರ್‍ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಪ್ರಸ್ತುತ ಇವರು ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ (ಎನ್‌ಡಿಆರ್‌ಐ) ಯುಜಿಸಿ ಫೆಲೋಷಿಪ್‌ನೊಂದಿಗೆ ಪಿ.ಎಚ್‌ಡಿ ವ್ಯಾಸಂಗ ಮಾಡು ತ್ತಿದ್ದು, ಆಂಧ್ರಪ್ರದೇಶದ ಕೃಷಿ ವಿವಿಯಲ್ಲಿ ಎಂ.ಎಸ್ಸಿ(ಅಗ್ರಿ) ಜಿಆರ್‌ಎಫ್ ಫೆಲೋ ಷಿಪ್‌ನೊಂದಿಗೆ ಸ್ನಾತಕೋತ್ತರ ಪದವಿ ಯಲ್ಲಿ ಪ್ರಥಮ ರ್‍ಯಾಂಕ್‌ಗಳಿಸಿದ್ದಾರೆ. ಬೆಂಗ ಳೂರು ಕೃಷಿ ವಿವಿಯಲ್ಲಿ ಬಿ.ಎಸ್ಸಿ (ಅಗ್ರಿ) ಯನ್ನು ಮೆರಿಟ್ ಸ್ಕಾಲರ್‌ಶಿಪ್‌ನೊಂದಿಗೆ ಪೂರೈಸಿರುವ ಇವರು ಕೃಷಿ ವಿಸ್ತರಣಾ ವಿಭಾಗದ ವಿಜ್ಞಾನಿಯಾಗಿ ಹೊರಹೊಮ್ಮಿ ದ್ದಾರೆ. ಇವರು ಪ್ರಾಥಮಿಕ ಶಿಕ್ಷಣ ಪಿರಿಯಾ ಪಟ್ಟಣ ತಾಲೂಕು ಕಂಪ್ಲಾಪುರದ ನಾಗಾ ವಿದ್ಯಾಸಂಸ್ಥೆ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಜವಹರ್ ನವೋದಯ ಶಾಲೆಯಲ್ಲಿ ಪಡೆದುಕೊಂಡಿದಿದ್ದಾರೆ.