– ರಾಜಸಾಬ ನಧಾಪ, ಶಿಕಾರಿಪುರ
ಕಲ್ಲಂಗಡಿ ಹಣ್ಣು ಬೆಳೆಯಲು ಈ ಮಣ್ಣು ಅತ್ಯಂತ ಸೂಕ್ತವಾಗಿದೆ. ಬೇಸಗೆಯಲ್ಲಿ ಈ ಬೆಳೆಗೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಕಲ್ಲಂಗಡಿ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಇರುವ ಉಷ್ಣ ವಲಯದ ವಾತಾವರಣ ಹೊಂದುತ್ತದೆ. ನವೆಂಬರ್‌ನಿಂದ ಫೆಬ್ರವರಿ ತಿಂಗಳಲ್ಲಿ ಬೆಳೆದರೆ ಹಣ್ಣುಗಳು ತುಂಬಾ ಚೆನ್ನಾಗಿ ಬರುತ್ತವೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿರುವ ತಳಿಗಳಾದ ಅರ್ಕಾ ಮುತ್ತು, ಅರ್ಕಾ ಆಕಾಶ, ಅರ್ಕಾ ಐಶ್ವರ್ಯ, ಅರ್ಕಾ ಮಾಣಿಕ್, ಅರ್ಕಾ ಮಧುರ ತಳಿಗಳು ಹಾಗೂ ಖಾಸಗಿ ಹೈಬ್ರಿಡ್ ಕಲ್ಲಂಗಡಿಗಳನ್ನು ಬೆಳೆಯಬಹುದು. ನಿಮ್ಮ ಒಂದು ಎಕರೆಗೆ ತಳಿಗಳಾದರೆ 300 ಗ್ರಾಂ ಬೀಜ ಬೇಕು. ಹೈಬ್ರಿಡ್ ತಳಿಯಾದರೆ 120 ಗ್ರಾಂ ಬೀಜ ಸಾಕು. ಎಕರೆಗೆ 10 ಟನ್ ತಿಪ್ಪೆ ಗೊಬ್ಬರ ಹಾಕಿದ ನಂತರ 2.5 ರಿಂದ 3.00 ಮೀ ಅಂತರದ ಸಾಲುಗಳಲ್ಲಿ 1 ಮೀ. ಅಂತರದಲ್ಲಿ ಪ್ರತಿ ಗುಣಿಗೆ 3- 4 ಬೀಜಗಳಂತೆ ಬಿತ್ತಬೇಕು. 2- 3 ವಾರಗಳ ನಂತರ ಪ್ರತಿ ಮಡಿಯಲ್ಲಿ 2 ಸಸಿಗಳನ್ನು ಕೀಳಬೇಕು. ಬಿತ್ತುವಾಗ ಎಕರೆಗೆ 20 ಕೆ.ಜಿ. ಸಾರಜನಕವನ್ನು ಮೇಲು ಗೊಬ್ಬರವಾಗಿ ಸಸಿಯಿಂದ 15 ಸೆಂ.ಮೀ. ಪಕ್ಕದಲ್ಲಿ ಮತ್ತು 2.5 ಸೆಂ.ಮೀ. ಆಳದಲ್ಲಿ ನೀಡಿ ಮಣ್ಣು ಮುಚ್ಚಬೇಕು. ಬೀಜ ಹಾಕಿದ 20 ದಿನಗಳ ನಂತರ ಮುಖ್ಯ ಕುಡಿಗಳನ್ನು ಚಿವುಟುವುದರಿಂದ ಹೆಚ್ಚು ಮಗ್ಗಲು ಇಲಕುಗಳನ್ನು ಬಿಡುವುದು. ಪ್ರತಿ ಕಲ್ಲಂಗಡಿ ಬಳ್ಳಿಗೆ 3- 4 ಕಾಯಿ ಬಿಟ್ಟು ಉಳಿದ ಕಾಯಿಗಳನ್ನು ಕಿತ್ತುಹಾಕಬೇಕು. ಮಣ್ಣು, ನೀರು ಹಾಗೂ ವಾತಾವರಣ ಆಧರಿಸಿ ಪ್ರತಿ 4- 6 ದಿನಗಳಿಗೊಮ್ಮೆ ನೀರು ಕೊಡಿ. ಎಕರೆಗೆ ಒಂದು ಜೇನುಪೆಟ್ಟಿಗೆ ಇಡುವುದರಿಂದ ಕಲ್ಲಂಗಡಿ ಇಳುವರಿ ಹೆಚ್ಚಿಸಬಹುದು. ಈ ಬೆಳೆಗೆ ಗಂಧಕಯುಕ್ತ ಔಷಧಿಗಳನ್ನು ಈ ಬೆಳೆಗೆ ಬಳಸಬಾರದು.
Advertisement
* ಡಾ. ಅಶೋಕ್ ಪಿ., ಕೃಷಿ ವಿಜ್ಞಾನಿ, ಹಾವೇರಿ