Advertisement
ರೇಡಿಯೋಗಳಲ್ಲಿ ಎಫ್ ಎಂ ಬಾನುಲಿಗಳ ಪ್ರಬಲ ಪೈಪೋಟಿ ಒಂದೆಡೆಯಾದರೆ, ಸಾಕಷ್ಟು ರೇಡಿಯೋ ಕೇಳುಗರು ಟಿವಿ, ಮೊಬೈಲ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದದ್ದು ಸಹ ಇನ್ನೊಂದು ಸಮಸ್ಯೆ. ಹೀಗಿರುವಾಗ ಹೊಸ ಆವಿಷ್ಕಾರ ವಿನೂತನ ಪ್ರಯೋಗಗಳು ಮಾಡಬೇಕಾದ ಅನಿವಾರ್ಯತೆ ಸಹಜವಾಗಿ ಬಂದೊದಗುತ್ತದೆ. ಆ ಪ್ರಯೋಗಾರ್ಥವೇ ಅರಸೀಕೆರೆ ಸಮೀಪ ಸಮುದಾಯಾಧಾರಿತ ರೇಡಿಯೋವನ್ನು ಸೌರವಿದ್ಯುತ್ ಚಾಲಿತ ನಿರ್ಮಿಸಲಾಗಿದ್ದು, ಜನರಿಗೆ ಮಾಹಿತಿ ನೀಡುವುದರ ಜೊತೆಗೆ ದಾರಿ ದೀಪದಂತೆಯೂ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
Related Articles
Advertisement
ಹಳ್ಳಿಗಳಿಗೆ ಬಹಳ ಉಪಯುಕ್ತವಾಗುವ ಕೃಷಿ ಕುರಿತಾದ ಮಾಹಿತಿಗೆ ಕೃಷಿರಂಗ ಎಂಬ ಕಾರ್ಯಕ್ರಮ ಸಂಜೆ 6 ರಿಂದ 7 ಪ್ರಸಾರವಾಗುತ್ತಿದ್ದು, ಮೊದಮೊದಲು ಆಕಾಶವಾಣಿ ಸಿಬಂದಿ ರೈತರನ್ನು ಆಕಾಶವಾಣಿ ಹಾಸನ ಕೇಂದ್ರಕ್ಕೆ ಕರೆಸಿ ಮಾಹಿತಿ ನೀಡುತ್ತಿದ್ದು, ಕಾಲಕ್ರಮೇಣ ಜನರನ್ನು ಮತ್ತಷ್ಟು ಸೆಳೆಯಲೆಂದು ರೈತರಿದ್ದಲ್ಲಿಗೆ ತೆರಳಿ ಅವರ ಕೆಲಸದ ನಡುವೆ ಕೃಷಿ ಮಾಹಿತಿ ಸಂಗ್ರಹಿಸುತ್ತಿದ್ದರು. ಅನಂತರ ರೈತರೇ ಮುಖ್ಯ ರೇಡಿಯೋ ವರದಿಗಾರರೆಂಬಂತೆ ಕಾರ್ಯಕ್ರಮದ ಬಹುಭಾಗ ಅವರೇ ನಡೆಸಿಕೊಡುವಂತೆ ಮಾಡುತ್ತಾರೆ ಇದು ಬಹುತೇಕ ರೈತರ ಬಳಗಕ್ಕೆ ಮಾಹಿತಿ ಇನ್ನಷ್ಟು ಅರ್ಥವಾಯಿತು ಮಾತ್ರವಲ್ಲದೇ ಸಾಮಾಜಿಕ ರಂಗದಲ್ಲೂ ಅವರನ್ನು ಗುರುತಿಸುವ ಕಾರ್ಯವಾಯಿತು.
ಕೃಷಿ ಮಾತ್ರವಲ್ಲದೆ ಹೈನುಗಾರಿಕೆ, ಕರಕುಶಲ ಕಲೆ, ರಾಜ್ಯಸುದ್ದಿ, ಯಕ್ಷಗಾನ ಸೇರಿದಂತೆ ಹಳೆ ಮತ್ತು ಈಗಿನ ಕಾಲದ ಸಿನೆಮಾ ಹಾಡನ್ನು ಸಹ ಪ್ರಸಾರ ಮಾಡಲಾಗುತ್ತಿದ್ದು ಮನೋರಂಜನೆಯೊಂದಿಗೆ ಮಾಹಿತಿ ನೀಡುವ ನೆಲೆಯಲ್ಲಿ ಸೌರವಿದ್ಯುತ್ ಆಧಾರಿತ ರೇಡಿಯೋ ತಂತ್ರಜ್ಞಾನ ಅಳವಡಿಸಿದ ಸೆಲ್ಕೋ ಸೋಲಾರ್ ಸಂಸ್ಥೆಯ ಕಾರ್ಯ ಮನಮೆಚ್ಚುವಂತದ್ದಾಗಿದೆ.
– ರಾಧಿಕಾ, ಕುಂದಾಪುರ