ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖಬೆಳವಣಿಗೆಗೆ ಶ್ರಮಿಸಬೇಕಾದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಮಂಡಳಿ (ಕೆಕೆಆರ್‌ಡಿಬಿ) ಇಲ್ಲಿನ ಕೃಷಿ ವಿಶ್ವವಿದ್ಯಾಲಯ ವಿಚಾರದಲ್ಲಿಮಾತ್ರ ಗಾಢ ಮೌನಕ್ಕೆ ಶರಣಾದಂತಿದೆ. ಆರು ಜಿಲ್ಲೆಗಳ ವ್ಯಾಪ್ತಿವಿಸ್ತರಿಸಿರುವ ವಿವಿಗೆ ನಿರೀಕ್ಷಿತ ಮಟ್ಟದ ಆದ್ಯತೆ ಸಿಗದಂತಾಗಿದೆ.
ಕಳೆದ ಮೂರು ವರ್ಷಗಳಿಂದ ವಿವಿಯಿಂದ ನಾನಾಉದ್ದೇಶಗಳಿಗೆ ಸುಮಾರು 229 ಕೋಟಿ ರೂ.ಗೂ ಅ ಧಿಕ ಮೊತ್ತದಪ್ರಸ್ತಾವನೆ ಸಲ್ಲಿಸಲಾಗಿದೆ.
ಆದರೆ ಈವರೆಗೆ ಒಂದೇ ಒಂದು ರೂ.ಕೂಡ ಬಂದಿಲ್ಲ ಎನ್ನುತ್ತಾರೆ ವಿವಿ ಅಧಿ ಕಾರಿಗಳು.ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ,ಬೀದರ, ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ರಾಯಚೂರುವಿಶ್ವವಿದ್ಯಾಲಯದಿಂದ ನಿರಂತರ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ.
ವಿವಿ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವನಿಟ್ಟಿನಲ್ಲಿ ಅನೇಕ ಕೇಂದ್ರ ಆರಂಭಿಸುವುದು, ಹೊಸ ಸೌಲಭ್ಯಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಸ್ತಾವನೆ ಸಲ್ಲಿಸುತ್ತಲೇ ಬರಲಾಗಿದೆ.
ಅದರಲ್ಲಿ ಮುಖ್ಯವಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಮಾದರಿಬೋಧನಾ ಕ್ಷೇತ್ರದ ಆಧುನೀಕರಣ, ಒಂದು ಕೋಟಿ ರೂ. ವೆಚ್ಚದಲ್ಲಿನೀರು ತಂತ್ರಜ್ಞಾನ ಸಂಶೋಧನಾ ಕಾರ್ಯಕ್ರಮ, 5 ಕೋಟಿ ರೂ.ವೆಚ್ಚದಲ್ಲಿ ಕೃಷಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಕೇಂದ್ರ, 2.50 ಕೋಟಿ ರೂ.ವೆಚ್ಚದಲ್ಲಿ ಸಂಸ್ಕರಿಸಿದ ಆಹಾರದಲ್ಲಿ ಮಾಲಿನ್ಯಕಾರಕ ಕಲಬೆರಕೆ ಪತ್ತೆಘಟಕ, ಐದು ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಸಸ್ಯ, ಜಾನುವಾರುಮತ್ತು ಮೀನುಗಾರಿಕೆ ಸಂಶೋಧನಾ ಅಭಿವೃದ್ಧಿ ಕೇಂದ್ರದ ಸ್ಥಾಪನೆ,10 ಕೋಟಿ ರೂ. ವೆಚ್ಚದಲ್ಲಿ ರಾಯಚೂರಿನ ಕೃಷಿ ವಿವಿ ಆವರಣದಲ್ಲಿಸಂಶೋಧನಾ ಸಮುತ್ಛಯ ಕಟ್ಟಡ ನಿರ್ಮಾಣ, 2.50 ಕೋಟಿರೂ. ವೆಚ್ಚದಲ್ಲಿ ಯಾದಗಿರಿ, ಬೀದರ, ರಾಯಚೂರಿನಲ್ಲಿ ಬಾನುಲಿಕೇಂದ್ರ ಸ್ಥಾಪಿಸುವುದು ಸೇರಿದಂತೆ ಸುಮಾರು 229 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಸ್ತಾವನೆಗೂಸರಿಯಾದ ಸ್ಪಂದನೆ ಸಿಗದಿರುವುದು ವಿಪರ್ಯಾಸ.
ಸಿದ್ಧಯ್ಯಸ್ವಾಮಿ ಕುಕನೂರು