Advertisement
ಹಲವು ಯಂತ್ರ ಕೇಂದ್ರಗಳ ಗುತ್ತಿಗೆ ಅವಧಿ ಮುಗಿದು ವರ್ಷ ಕಳೆದರೂ ನವೀಕರಣವಾಗಿಲ್ಲ. ಜತೆಗೆ ಹೊಸ ಕಂಪೆನಿಗಳು ಗುತ್ತಿಗೆಗೆ ಆಸಕ್ತಿ ತೋರುತ್ತಿಲ್ಲ. ಕೃಷಿ ಇಲಾಖೆಯಡಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಯಂತ್ರಧಾರೆ ಕೇಂದ್ರಗಳನ್ನು ನಡೆಸು ತ್ತಿದ್ದು, ಉಡುಪಿ ಜಿಲ್ಲೆಯಲ್ಲಿ 7 ರ ಪೈಕಿ 4 ಕೇಂದ್ರಗಳ ಗುತ್ತಿಗೆ ಅವಧಿ ಮುಗಿ ದಿದೆ. ದಕ್ಷಿಣ ಕನ್ನಡದ 15 ರಲ್ಲಿ 6 ರ ಗುತ್ತಿಗೆ ಮುಗಿದಿದೆ. ಉಳಿದವೂ ಜನವರಿಯಲ್ಲಿ ಮುಗಿಸಲಿವೆ. ಅದೇ ರೀತಿ ರಾಜ್ಯದ 490 ಹೋಬಳಿಗಳಲ್ಲಿನ 696 ಕೇಂದ್ರದಲ್ಲಿ ಬಹುಪಾಲು ಸ್ಥಗಿ ತಗೊಂಡಿವೆ. ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ನಿರ್ವಹಿಸುತ್ತಿರುವ 25 ಜಿಲ್ಲೆಗಳ 164 ಕೇಂದ್ರಗಳು ಮಾತ್ರ ಚಾಲನೆಯಲ್ಲಿವೆ. ಜನವರಿವರೆಗೆ ಇವುಗಳ ಅವಧಿ.
ಸರಕಾರದ ಶೇ. 70 ಹಾಗೂ ಗುತ್ತಿಗೆ ವಹಿಸಿಕೊಳ್ಳುವ ಕಂಪೆನಿ ಶೇ. 30 ಅನುದಾನದಲ್ಲಿ ಯಂತ್ರಗಳನ್ನು ಖರೀದಿಸಿ ಕೇಂದ್ರಗಳನ್ನು ಆರಂಭಿಸ ಲಾಗಿತ್ತು. ಭತ್ತ ಕಟಾವು ಯಂತ್ರ, ಟ್ರಾಕ್ಟರ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, ರೋಟಾವೇಟರ್, ಡಿಸ್ಕ್ ನೇಗಿಲು ಸೇರಿದಂತೆ 44 ಬಗೆಯ ಯಂತ್ರೋಪಕರಣಗಳು ಲಭ್ಯವಿ ದ್ದವು. ಸರಕಾರ ಗೊತ್ತುಪಡಿಸಿದ ಬಾಡಿಗೆಗೆ ಈ ಕೇಂದ್ರಗಳು ರೈತರಿಗೆ ಸೇವೆ ನೀಡಬೇಕಿತ್ತು. ಆರಂಭದಲ್ಲಿ ಇದರ ನಿರ್ವಹಣೆಗೆ ಖಾಸಗಿ ಸಂಸ್ಥೆಗಳು ಉತ್ಸಾಹ ತೋರಿದ್ದವು. ಆದರೆ ಕಡಿಮೆ ಬಾಡಿಗೆ, ಡೀಸೆಲ್ ದುಬಾರಿ, ಚಾಲಕರು, ಸಿಬಂದಿ ಕೊರತೆ, ನಿರ್ವಹಣೆಗೆ ಸರಕಾರ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ ಅವಧಿ ಮುಗಿದಿದ್ದರೂ ಇದುವರೆಗೆ ಗುತ್ತಿಗೆ ನವೀಕರಣ ಅಥವಾ ಬದಲಿ ಸಂಸ್ಥೆಗೆ ಹೊಣೆ ವಹಿಸುವ ಕೆಲಸವಾಗಿಲ್ಲ. ಹಲವೆಡೆ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಸರಕಾರ ಶೇ. 70 ಅನುದಾನ ನೀಡಿದ್ದು, ಕಂಪೆನಿ ಯಂತ್ರಗಳನ್ನು ಇಲಾಖೆಗೆ ವಾಪಸ್ ನೀಡಬೇಕಿದ್ದು ಈ ಪ್ರಕ್ರಿಯೆಯೂ ಸರಿಯಾಗಿ ನಡೆಯುತ್ತಿಲ್ಲ. ಉಡುಪಿ, ದ.ಕ.ದಲ್ಲಿ ಹಿಂದಿನ ಗುತ್ತಿಗೆ ಸಂಸ್ಥೆಗಳೇ ಹೊಸ ವ್ಯವಸ್ಥೆ ಬರುವ ತನಕ ಮುಂದುವರಿಯಲು ಮೌಖೀಕವಾಗಿ ಸೂಚಿಸಲಾಗಿದೆ. ಆದರೆ ಒಪ್ಪಂದವಿ ಲ್ಲದ ಕಾರಣ ಸಮರ್ಪಕ ರೀತಿಯಲ್ಲಿ ಸಾಗದಿರುವುದು ರೈತರಿಗೆ ಸಮಸ್ಯೆ ಸೃಷ್ಟಿಸಿದೆ.
Related Articles
Advertisement
ಕೇಂದ್ರಗಳಲ್ಲಿ ಲಭ್ಯವಿರುವ ಯಂತ್ರ ಗಳಿಗೆ ಕಡಿಮೆ ಬಾಡಿಗೆ ಇರುವು ದರಿಂದ ಖಾಸಗಿ ಯಂತ್ರಗಳ ದರ ಸಮರ, ರೈತರ ಶೋಷಣೆ ತಡೆಯಲು ಅವಕಾಶವಿದೆ. ಉದಾಹರಣೆಗೆ ಕರಾವಳಿವಯಲ್ಲಿ ಭತ್ತ ಕಟಾವು ಯಂತ್ರಕ್ಕೆ ಖಾಸಗಿಯಲ್ಲಿ 2,200 – 2,300 ರೂ. ತನಕ ಬಾಡಿಗೆ ಇದ್ದರೆ ಯಂತ್ರಧಾರೆಯಲ್ಲಿ 1,800ರಿಂದ 2,000 ರೂ. ನೊಳಗೆ ಬಾಡಿಗೆ ಇದೆ.
ಕೃಷಿ ಯಂತ್ರಧಾರೆ ಕೇಂದ್ರಗಳಿಂದ ಸಾಕಷ್ಟು ಅನುಕೂಲವಿದೆ. ಇದರ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.– ಎನ್. ಚೆಲುವರಾಯಸ್ವಾಮಿ, ರಾಜ್ಯ ಕೃಷಿ ಸಚಿವ ರಾಜೇಶ್ ಗಾಣಿಗ ಅಚ್ಲಾಡಿ