ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಸುಧಾರಣಾ ಮಸೂದೆಗಳ ಅನುಷ್ಠಾನರೈತರ ಪಾಲಿಗೆ ಲಾಭದಾಯಕವಾಗಿದ್ದು, ಕಾಂಗ್ರೆಸ್ ಮತ್ತು ಎಡ ಪಕ್ಷಗಳು ವಿನಾಕಾರಣ ರೈತರನ್ನು ದಾರಿ ತಪ್ಪಿಸುತ್ತಿವೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಎಸ್.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಳೆದ ಹಲವು ದಶಕಗಳ ಹಿಂದೆ ರಚಿಸಿದ ಕಾಯ್ದೆಗಳು ತಿದ್ದುಪಡಿಯಾಗದೇ ಇದ್ದವು. ಇದರಿಂದ ಎಪಿಎಂಸಿಗಳಲ್ಲಿ ಏಕಸ್ವಾಮ್ಯತೆ ಬಂದಿತ್ತು. ಅದನ್ನು ತಪ್ಪಿಸಲು ರೈತರೇ ನೇರವಾಗಿಖರೀದಿದಾರನಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದಎಪಿಎಂಸಿಗಳನ್ನು ಮುಚ್ಚಲಾಗುತ್ತದೆ ಎಂದು ವದಂತಿ ಹಬ್ಬಿಸಿರುವುದುಸರಿಯಲ್ಲ ಎಂದರು. ರೈತರ ಖಾತೆಗೆ ತಲಾ ಎರಡು ಸಾವಿರ
ರೂ.ನಂತೆ ಮೂರು ಬಾರಿ ಸೇರಿ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡುವ ಕಿಸಾನ್ ಸಮ್ಮಾನ್ ಯೋಜನೆ. ಇದರ ಜೊತೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದಕ್ಕೆ 4 ಸಾವಿರ ರೂ ಸೇರಿಸಿ ಒಟ್ಟು ವಾರ್ಷಿಕ 10 ಸಾವಿರ ರೂ.ಗಳನ್ನು ರೈತರಿಗೆ ನೀಡಲಾಗುತ್ತಿದೆ. ಇ-ಮಾರುಕಟ್ಟೆ (ಇ ನ್ಯಾಮ್) ಸ್ಥಾಪನೆಯ ಮೂಲಕ ದೇಶಾದ್ಯಂತ ರೈತರನ್ನು ಮಾರುಕಟ್ಟೆಗೆ ಜೋಡಿಸಲಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಜೊಡಣೆ, ಆತ್ಮ ನಿರ್ಭರ ಭಾರತ ಯೋಜನೆಯಡಿ 1 ಲಕ್ಷ ಕೋಟಿ ರೂ. ಮೊತ್ತವನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ನಿಯೋಜಿಸಲಾಗಿದೆ. ಇದರಿಂದಾಗಿ 2014ರಲ್ಲಿ 250 ಮಿಲಿಯನ್ ಟನ್‌ನಷ್ಟಿದ್ದ ಆಹಾರ ಧಾನ್ಯಗಳ ಉತ್ಪಾದನೆ 2020ರ ವೇಳೆಗೆದಾಖಲೆ ಮಟ್ಟದ 291 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ. ಇಳುವರಿ ಹೆಚ್ಚಳದಿಂದ ಸುಮಾರು ಶೇ.20 ರಿಂದ 30 ರಷ್ಟು ಆದಾಯ ಹೆಚ್ಚಳವೂ ಸಾಧ್ಯವಾಗಲಿದೆ ಎಂದು ವಿವರಿಸಿದರು.
ಈಗಾಗಲೇ 2020ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಅತಿ ಹೆಚ್ಚುಪ್ರಮಾಣದ ರೈತರ ಉತ್ಪನ್ನವನ್ನುಖರೀದಿಸಲಾಗಿದೆ. ಇದು ಕನಿಷ್ಠ ಬೆಂಬಲ ಯೋಜನೆಯ ರದ್ದತಿ ಕುರಿತಾದ ಆರೋಪವು ಸುಳ್ಳು ಎನ್ನುವುದನ್ನು ಸ್ಪಷ್ಟಗೊಳಿಸುತ್ತದೆ. ಕೇರಳದಲ್ಲಿ ಎಪಿಎಂಸಿ ಕಾಯ್ದೆ ಜಾರಿಗೊಳಿಸದೆ ಇರುವ ಕಮ್ಯುನಿಸ್ಟರುಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆಇದು ಅವರ ರಾಜಕೀಯ ಕುತಂತ್ರಕ್ಕೆ ಸಾಕ್ಷಿಯಾಗಿದೆ. ವಿರೋಧ ಪಕ್ಷಗಳು ಸೋತಿದ್ದು ಹತಾಶೆಯಿಂದ ರೈತರನ್ನು ಮೋದಿ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವಾಗಿದೆ. ದಲ್ಲಾಳಿಗಳು ಮತ್ತು ಕಮಿಷನ್ ಏಜೆಂಟರು ರಾಜಕೀಯ ದುರುದ್ದೇಶದೊಂದಿಗೆ, ರೈತರ ಮುಖವಾಡ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವರುದ್ರಗೌಡ ಸೇರಿ ಹಲವರು ಇದ್ದರು.