ಎಚ್.ಡಿ.ಕೋಟೆ: ತಾಲೂಕಿನ ಬಹುತೇಕ ಕಡೆ ಉತ್ತಮ ಮಳೆಯಾಗಿದ್ದು,ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಕಳೆದ ವಾರ ಸುರಿದ ಮಳೆಯಿಂದ ಭೂಮಿ ಹದ ಮಾಡಿಕೊಂಡಿದ್ದ ರೈತರು ಇದೀಗ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲೂಕಿನ ಅಣ್ಣೂರು ಭಾಗದಲ್ಲಿ ಬಹುತೇಕ ರೈತರು ತಂಬಾಕು ಬೆಳೆಯಾಗಿದ್ದು, ಈ ಮೊದಲೇ ತಂಬಾಕು ಬಿತ್ತನೆ ಮಾಡಿ ಗಿಡಬೆಳೆಸಿಕೊಂಡಿದ್ದ ರೈತರು ಮಂಗಳವಾರ ಮುಂಜಾನೆಯಿಂದಲೇ ತಂಬಾಕು ನಾಟಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು.
ಇನ್ನುಳಿದಂತೆ ತಾಲೂಕಿನ ವಾಣಿಜ್ಯ ಬೆಳೆಯಾದ ಹತ್ತಿ ಬಿತ್ತನೆಯಲ್ಲಿ ತೊಡಗಿರುವುದು ಕಂಡು ಬಂತು. ತಾಲೂಕಿನ ಹತ್ತಿ ಬೆಳೆಗೆನೆರೆಯ ತಮಿಳುನಾಡಿನಲ್ಲಿ ಅಪಾರ ಬೇಡಿಕೆ ಇದೆ.ಇನ್ನು ರಾಗಿ, ಅಲಸಂದೆ, ಮುಸುಕಿನಜೋಳ ಇನ್ನಿತರ ಬಿತ್ತನೆ ಕಾರ್ಯತಾಲೂಕಿನಾದ್ಯಂತ ಆರಂಭಗೊಂಡಿದ್ದು,ಉತ್ತಮ ಮಳೆಯಾಗುತ್ತಿರು ವುದರಿಂದರೈತರ ಸಂತಸಗೊಂಡಿದ್ದು, ಬಿಸಿಲಿನಿಂದ ಕಾದಿದ್ದ ಭೂಮಿ ಇದೀಗ ತಂಪಾಗಿದೆ.
ತಗ್ಗು ಪ್ರದೇಶಗಳಿಗೆ ಮಳೆ ನೀರು: ಎಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ 3ನೇ ಬೀದಿಯ ಹಲವು ಮನೆ ಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆ ಯಿಂದ ಹಲವು ರಸ್ತೆಗಳ ಗುಂಡಿಗಳು ನೀರಿನಿಂದ ಕೂಡಿದ್ದವು. ಇನ್ನು ಪಟ್ಟಣದ ತಗ್ಗುಪ್ರದೇಶದಲ್ಲಿ ನಿರ್ಮಿಸಿರುವ ಮನೆಗಳತ್ತ ಮಳೆಯ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು.ಈ ಕುರಿತು ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾ ಧಿಕಾರಿ ವಿಜಯಕುಮಾರ್, ಪುರಸಭೆ ಸಿಬ್ಬಂದಿಗಳನ್ನುಸ್ಥಳಕ್ಕೆ ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ ಅನುದಾನ ಮಂಜೂರಾಗುತ್ತಿದ್ದಂತೆಯೇ ತಗ್ಗು ಪ್ರದೇಶಗಳತ್ತ ನೀರು ನಿಲ್ಲದಂತೆ ನೋಡಿಕೊಳ್ಳ ಲಾಗುವುದು ಎಂದು ಭರವಸೆ ನೀಡಿದರು.