Advertisement

ರಾಜ್ಯದಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಅಗ್ರಿ ಟೂರಿಸಂ

11:13 AM Feb 27, 2020 | Lakshmi GovindaRaj |

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಗೆ ಹೊಸ ಚೈತನ್ಯ ನೀಡಲು ಸಚಿವ ಸಿ.ಟಿ. ರವಿ ಮಹಾರಾಷ್ಟ್ರ ಮಾದರಿಯಲ್ಲಿ ಕೃಷಿ ಪ್ರವಾಸೋದ್ಯಮ ಜಾರಿಗೆ ತರಲು ಮುಂದಾಗಿದ್ದಾರೆ. ಈ ಕುರಿತು ಯೋಜನೆಯ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡಿ ರುವ ಪ್ರವಾಸೋದ್ಯಮ ಇಲಾಖೆ ಮಾ. 5ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಲಿರುವ ಬಜೆಟ್‌ನಲ್ಲಿ ನೂತನ ಯೋಜನೆಯನ್ನು ಘೋಷಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

Advertisement

ರಾಜ್ಯ ಸರ್ಕಾರ 2015ರ ಪ್ರವಾಸೋದ್ಯಮ ನೀತಿಯಲ್ಲಿ ಘೋಷಣೆ ಮಾಡಿರುವಂತೆ ರಾಜ್ಯದಲ್ಲಿ ಪ್ರವಾಸೋದ್ಯಮದೊಂದಿಗೆ ಕೃಷಿಯನ್ನೂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ನೂತನ ಯೋಜನೆ ಜಾರಿಗೆ ತರಲು ಇಲಾಖೆ ನಿರ್ಧರಿಸಿದ್ದು, ರಾಜ್ಯದ ಹತ್ತು ಕಡೆಗಳಲ್ಲಿ ಅಗ್ರಿ ಟೂರಿಸಂ (ಕೃಷಿ ಪ್ರವಾಸೋದ್ಯಮ) ಯೋಜನೆ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಖಾಸಗಿಯಾಗಿ ಕೊಡಗು, ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಟೂರಿಸಂ ಜಾರಿಗೊಳಿಸುವ ಯತ್ನ ನಡೆಯುತ್ತಿದ್ದು, ಬಂಡವಾಳ ಮತ್ತು ಸೌಲ ಭ್ಯದ ಕೊರತೆಯಿಂದ ಯಶಸ್ವಿಯಾಗಿಲ್ಲ ಎನ್ನಲಾಗಿದ್ದು, ಸರ್ಕಾ ರವೇ ಅಧಿಕೃತವಾಗಿ ರೈತರಿಗೆ ಸಹಾಯಧನ ನೀಡುವ ಮೂಲಕ ಯೋಜನೆ ಜಾರಿಗೆ ಮುಂದಾಗಿದೆ.

ಏನಿದು ಕೃಷಿ ಪ್ರವಾಸೋದ್ಯಮ?: ಕೃಷಿ ಸಂಬಂಧಿತ ಚಟುವಟಿಕೆ ಹಾಗೂ ಕೃಷಿ ಪದ್ಧತಿ, ಗ್ರಾಮೀಣ ಜೀವನ ಪದ್ಧತಿ ಕುರಿತು ಜನರಿತೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ರಾಗಿ, ಭತ್ತ, ಜೋಳ, ಗೋಧಿ, ದ್ವಿದಳ ಧಾನ್ಯಗಳು, ತರಕಾರಿ, ಸೊಪ್ಪು ಬೆಳೆಯುವ ವಿಧಾನಗಳ ಬಗ್ಗೆ ಕಾರ್ಪೊರೇಟ್‌ ವಲಯದಲ್ಲಿ ಉದ್ಯೋಗ ಮಾಡುತ್ತಿರುವ ಅನೇಕ ಜನರಿಗೆ ತಿಳಿದಿರುವುದಿಲ್ಲ. ಅಲ್ಲದೇ ವಿದೇಶಿ ಪ್ರವಾಸಿಗರಿಗೂ ಭಾರ ತದ ಕೃಷಿ ಹಾಗೂ ಗ್ರಾಮೀಣ ಬದುಕಿನ ಬಗ್ಗೆ ಮಾಹಿತಿ ಇರುವುದಿಲ್ಲ. ಅಂಥವರಿಗೆ ಎಲ್ಲ ರೀತಿಯ ಸೌಕರ್ಯ ಒಳಗೊಂಡ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸುವ ಮೂಲಕ ಕೃಷಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ಏನಿರುತ್ತದೆ ಅಗ್ರಿ ಟೂರಿಸಂನಲ್ಲಿ ?: ರಾಜ್ಯ ಸರ್ಕಾರ ರಾಜ್ಯದ ಹತ್ತು ಪ್ರದೇಶಗಳಲ್ಲಿ ಕನಿಷ್ಠ 5 ರಿಂದ 10 ಎಕರೆ ಜಮೀನು ಹೊಂದಿರುವ ರೈತರನ್ನು ಗುರುತಿಸಿ ಅವರಿಗೆ ಸರ್ಕಾದಿಂದಲೇ ಸುಸ್ಥಿರ ಹಾಗೂ ಪ್ರಗತಿಪರವಾಗಿ ಕೃಷಿ ಮಾಡಲು ಪ್ರೋತ್ಸಾಹಧನ ಒದಗಿಸಿ, ಅವರ ಜಮೀನಿನಲ್ಲಿ ಪ್ರವಾಸಿಗರಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಬೇರೆ ಬೇರೆ ಬೆಳೆಗಳು, ಬೆಳೆ ಬೆಳೆಯುವ ವಿಧಾನದ ಪ್ರಾತ್ಯಕ್ಷಿಕೆ ನೀಡಲು ತರಬೇತಿ, ಪ್ರವಾಸಿಗರು ಪ್ರವಾಸದ ಸಂದರ್ಭದಲ್ಲಿ ರೈತರ ಹೊಲದಲ್ಲಿಯೇ ಉಳಿಯಲು ವಸತಿ ವ್ಯವಸ್ಥೆಗೆ ಯೋಜನೆ ರೂಪಿಸ ಲಾಗಿದೆ. ಅಲ್ಲದೇ ಪ್ರವಾಸಿಗರು ಕೃಷಿ ಮಾಡುವ ವಿಧಾನದ ಸ್ವಯಂ ಅನುಭವ ಪಡೆಯಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ರೈತರ ಜಮೀನಿನಲ್ಲಿ ಕಲ್ಪಿಸಲು ಯೋಜಿಸಲಾಗಿದೆ.

ಕೃಷಿ ಪ್ರವಾಸೋದ್ಯಮದಿಂದ ನಗರ ಜೀವನದಿಂದ ಬೇಸತ್ತಿರುವ ಕಾಪೊìರೇಟ್‌ ವಲಯದಲ್ಲಿ ಕಾರ್ಯ ನಿರ್ವಹಿಸುವವರು ವಿದೇಶಿ ಪ್ರಜೆಗಳಿಗೆ ಹೊಸ ಮಾದರಿಯ ಜೀವನ ಶೈಲಿ ಅನುಭವ ದೊರೆ ಯುವುದರೊಂದಿಗೆ ರೈತರಿಗೂ ಆದಾಯ ಹೆಚ್ಚಾಗಲಿದೆ. ಆಯಾ ಪ್ರದೇಶದ ಗ್ರಾಮೀಣ ಜನರ ಉಡುಗೆ ತೊಡುಗೆ ಹಾಗೂ ಆಹಾರ ಪದ್ಧತಿಯನ್ನೂ ಪ್ರವಾಸಿಗರಿಗೆ ಪರಿಚಯಿಸುವ ಕೆಲಸವೂ ಆಗಲಿದೆ. ಜತೆಗೆ ಆದಾಯವೂ ಹೆಚ್ಚಾಗಲಿದೆ. ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಕೃಷಿ ಪ್ರವಾಸೋದ್ಯಮ ಕೈಗೊಳ್ಳಲು ಉತ್ತೇಜನ ನೀಡುವ ಮೂಲಕ ಗ್ರಾಮೀಣ ಜೀವನ ಪದ್ಧತಿ, ಬೆಳೆ ಮಾಹಿತಿ ತಿಳಿಸುವ ಉದ್ದೇಶವೂ ಇದೆ. ಗ್ರಾಮೀಣ ಕಲೆಗಳನ್ನೂ ಜೀವಂತ ವಾಗಿಡಲು ಅನುಕೂಲ ಎಂಬ ಲೆಕ್ಕಾಚಾರ ಇಲಾಖೆಯದ್ದಾಗಿದೆ.

Advertisement

ಮಹಾರಾಷ್ಟ್ರದಲ್ಲಿ ಯಶಸ್ವಿ: ಮಹಾರಾಷ್ಟ್ರದಲ್ಲಿ 2005ರಲ್ಲಿಯೇ ಆಗ್ರಿ ಟೂರಿಸಂ ಅನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಈಗ ಮಹಾ ರಾಷ್ಟ್ರದಲ್ಲಿ 150 ಕ್ಕೂ ಹೆಚ್ಚು ಆಗ್ರಿ ಟೂರಿಸಂ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆಗ್ರಿ ಟೂರಿಸಂನಿಂದ ಮಹಾರಾಷ್ಟ್ರ ಸರ್ಕಾರ ಪ್ರತಿ ವರ್ಷ 250 ಕೋಟಿ ರೂ.ಗೂ ಹೆಚ್ಚು ಆದಾಯ ಪಡೆದುಕೊಳ್ಳುತ್ತಿದೆ. ಅಲ್ಲದೇ ರೈತರೂ ಹೆಚ್ಚಿನ ಆದಾಯ ಪಡೆಯುತ್ತಿದ್ದು, ಮಹಾರಾಷ್ಟ್ರದ ಶೇ. 95 ನಗರವಾಸಿಗಳು ಕೃಷಿ ಪ್ರವಾಸೋದ್ಯಮ ಹಾಗೂ ಗ್ರಾಮೀಣ ಬದುಕು ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next