Advertisement
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಆರೋಗ್ಯಸಚಿವ ರಮೇಶ್ ಕುಮಾರ್, ಟಾಟಾ ಟ್ರಸ್ಟ್ ಸಂಸ್ಥೆಯು ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿ ಆರೋಗ್ಯ ಯೋಜನೆಯ ಬೆನ್ನೆಲುಬಾಗಿ ಅನುಷ್ಠಾನ ಮಾಡಲು ಮುಂದೆಬಂದಿದೆ. ಟಾಟಾ ಸಂಸ್ಥೆಯು ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್ ಜತೆ ಒಪ್ಪಂದ ಮಾಡಿಕೊಂಡು ಈಗಾಗಲೇ ಕೇರಳ,
ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಡಿಜಿಟಲ್ ನರ್ವ್ ಕೇಂದ್ರ ಸ್ಥಾಪಿಸಿದ್ದು, ಈ ಕೇಂದ್ರದ
ಮೂಲಕ ನಾಗರಿಕರಿಗೆ 24×7 ಶುಲ್ಕ ರಹಿತ ಸಹಾಯವಾಣಿ ಸೇವೆ ಒದಗಿಸುತ್ತಿದೆ ಎಂದರು. ಸಾರ್ವಜನಿಕರು ಡಿಎನ್‌ಸಿ
ಕೇಂದ್ರಗಳ ಮೂಲಕ ಸಲಹೆ ಪಡೆದು ತಮಗೆ ಬೇಕಾದ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಪಡೆಯಬಹುದು ಎಂದರು.