Advertisement

ಕರ್ನಾಟಕದ ಜತೆ ಒಪ್ಪಂದ ಮಾಡಿ: ಫ‌ಡ್ನವೀಸ್‌

11:17 AM Jun 20, 2020 | Suhan S |

ಮುಂಬಯಿ, ಜೂ. 19: ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರವಾಹ ಸಂಭವಿಸಿದಂತೆಯೇ ರಾಜ್ಯದ ಕೆಲವು ಭಾಗಗಳಲ್ಲಿ ವಿಕೋಪ ಮರುಕಳಿಸುವುದನ್ನು ತಪ್ಪಿಸಲು ಸಿಎಂ ಉದ್ಧವ್‌ ಠಾಕ್ರೆ ಅವರು ನೆರೆಯ ಕರ್ನಾಟಕದೊಂದಿಗೆ ಒಪ್ಪಂದ ಮಾಡಬೇಕು ಎಂದು ಬಿಜೆಪಿ ಮುಖಂಡ ದೇವೇಂದ್ರ ಫ‌ಡ್ನವೀಸ್‌ ಅವರು ಸಲಹೆ ನೀಡಿದ್ದಾರೆ.

Advertisement

2019ರ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯ ಅನಂತರ ಪಶ್ಚಿಮ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಮತ್ತು ಕರ್ನಾಟಕದ ಆಲಮಟ್ಟಿ ಅಣೆಕಟ್ಟಿನಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಾಗಿ ಕೊಲ್ಲಾಪುರ, ಸಾಂಗ್ಲಿ ಮತ್ತು ರಾಜ್ಯದ ಕೆಲವು ಭಾಗಗಳು ಪ್ರವಾಹವನ್ನು ಎದುರಿಸಿದ್ದವು. ರಾಜ್ಯ ಮುಖ್ಯಮಂತ್ರಿ ಕರ್ನಾಟಕದ ಮುಖ್ಯಮಂತ್ರಿ ಜತೆಗೆ ತುರ್ತು ಸಭೆ ನಡೆಸಿ ಎರಡೂ ರಾಜ್ಯಗಳ ಗಡಿಯಲ್ಲಿರುವ ಆಲಮಟ್ಟಿ ಅಣೆಕಟ್ಟಿನಿಂದ ನೀರನ್ನು ಹೊರಹಾಕುವ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಫ‌ಡ್ನವೀಸ್‌ ಹೇಳಿದ್ದಾರೆ.

ಸಮಯಕ್ಕೆ ಸರಿಯಾಗಿ ಆಲಮಟ್ಟಿ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡದಿದ್ದರೆ, ಅದು ಮಹಾರಾಷ್ಟ್ರದ ಗಡಿ ಪ್ರದೇಶಗಳಾದ ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ. ಉಭಯ ರಾಜ್ಯಗಳ ನಡುವಿನ ಒಪ್ಪಂದವು ನೀರಿನ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಲಿರುವ ಹಿನ್ನೆಲೆಯಲ್ಲಿ ಅದರಿಂದ ಎರಡೂ ರಾಜ್ಯಗಳಿಗೆ ಸಮಾ ನ ಪ್ರಯೋಜನವಾಗಲಿದೆ ಎಂದವರು ನುಡಿದಿದ್ದಾರೆ.

ರಾಜ್ಯದ ಅಣೆಕಟ್ಟುಗಳಲ್ಲಿ ಈಗಾಗಲೇ ಸಾಕಷ್ಟು ನೀರಿನ ಸಂಗ್ರಹವಿದೆ. ಈ (ಒಪ್ಪಂದ) ಕುರಿತು ಮುಖ್ಯಮಂತ್ರಿ ಕರ್ನಾಟಕ ಮುಖ್ಯಮಂತ್ರಿ ಜತೆಗೆ ಸಭೆ ನಡೆಸಿದರೆ ಉತ್ತಮ ಎಂದು ವಿಧಾನಸಭೆ ವಿಪಕ್ಷ ನಾಯಕ ಫ‌ಡ್ನವೀಸ್‌ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next