Advertisement

ಮಾಹೆ ವಿ.ವಿ.-ನೊವೋ ನೊರ್‌ಡಿಸ್ಕ್ ಜಿಬಿಎಸ್‌ ನಡುವೆ ಒಡಂಬಡಿಕೆ

12:17 AM Aug 06, 2023 | Team Udayavani |

ಮಣಿಪಾಲ : ಇಲ್ಲಿನ ಮಾಹೆ ವಿ.ವಿ. ಮತ್ತು ನೊವೋ ನೊರ್‌ಡಿಸ್ಕ್ ಗ್ಲೋಬಲ್‌ ಬಿಜಿನೆಸ್‌ ಸರ್ವೀಸಸ್‌ (ಜಿಬಿಎಸ್‌) ನಡುವೆ ಹೆಲ್ತ್‌ಕೇರ್‌ ಇಕೋಸಿಸ್ಟಮ್‌ ಅಪ್ಲಿಕೇಶನ್‌ ಮತ್ತು ಫಾರ್ಮಾ ವ್ಯಾಲ್ಯೂ ಚೈನ್‌ಗಳಲ್ಲಿನ ಹೊಸ ಅವಕಾಶಗಳ ಕುರಿತು ಒಡಂಬಡಿಕೆಗೆ ಸಹಿ ಹಾಕಲಾಗಿದೆ.

Advertisement

ಎರಡು ಸಂಸ್ಥೆಗಳು ಒಟ್ಟಾಗಿ ಈ ವಿಷಯವಾಗಿ ಇನ್ನೋವೇಶನ್‌ ಪ್ರಾಜೆಕ್ಟ್, ಹ್ಯಾಕಥಾನ್ಸ್‌, ಕೇಸ್‌ ಕಾಂಪಿಟೇಶನ್ಸ್‌, ಗೆಸ್ಟ್‌ ಲೆಕ್ಚರ್, ಎಜುಕೇಶನ್‌ ಪ್ರೋಗ್ರಾಮ್‌, ಇಂಟರ್ನ್ ಶಿಪ್‌, ಪ್ಲೇಸ್‌ಮೆಂಟ್ಸ್‌, ಎಂಪ್ಲಾಯಿ ಡೆವಲಪ್‌ಮೆಂಟ್‌, ಸಾಮಾಜಿಕ ಬದ್ಧತೆಯ ಕಾರ್ಯಗಳನ್ನು ನಡೆಸಲಿವೆ. ಆ. 3ರಂದು ಮಾಹೆ ಮಣಿಪಾಲ ಕ್ಯಾಂಪಸ್‌ನಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು ಮುಂದಿನ ಎರಡು ವರ್ಷ ಈ ಒಪ್ಪಂದ ಇರಲಿದೆ.

ನೊವೋ ನೊರ್‌ಡಿಸ್ಕ್ ಜಿಬಿಎಸ್‌ ವ್ಯವಸ್ಥಾಪಕ ನಿರ್ದೇಶಕ ಜಾನ್‌ ಡವೆರ್‌, ಉಪಾಧ್ಯಕ್ಷ ಡಾ| ಪ್ರಸನ್ನ ಕುಮಾರ್‌ ಮಾತನಾಡಿ, ಈ ಒಡಂಬಡಿಕೆಯು ಉಭಯ ಸಂಸ್ಥೆಗಳ ನಡುವೆ ಇನ್ನಷ್ಟು ಫಾರ್ಮಾ ವ್ಯಾಲ್ಯೂ ಚೈನ್‌ನಲ್ಲಿ ಅವಕಾಶಗಳನ್ನು ಹೆಚ್ಚಿಸಲಿದೆ ಮತ್ತು ಹೊಸ ಸಂಶೋಧನೆಗೂ ಅನುಕೂಲವಾಗಲಿದೆ ಎಂದರು.

ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌, ಸಹ ಕುಲಪತಿ ಡಾ| ಶರತ್‌ ರಾವ್‌, ಕುಲಸಚಿವ ಡಾ| ಗಿರಿಧರ ಪಿ. ಕಿಣಿ, ಪ್ಲಾನಿಂಗ್‌ ಆ್ಯಂಡ್‌ ಮಾನಿಟರಿಂಗ್‌ ನಿರ್ದೇಶಕ ಡಾ| ರವಿರಾಜ್‌ ಎನ್‌.ಎಸ್‌., ಕಾರ್ಪೋರೆಟ್‌ ರಿಲೇಶನ್ಸ್‌ ನಿರ್ದೇಶಕ ಡಾ| ಹರೀಶ್‌ ಕುಮಾರ್‌, ಮಣಿಪಾಲ ಕಾಲೇಜ್‌ ಆಫ್ ಫಾರ್ಮಾಸುಟಿಕಲ್‌ ಸೈನಸ್‌ ಪ್ರಾಂಶುಪಾಲ ಡಾ| ಸಿ. ಮಲ್ಲಿಕಾರ್ಜುನ ರಾವ್‌ ಮಾತನಾಡಿ, ಹೊಸ ಒಡಂಬಡಿಕೆಯಿಂದ ಆಗಲಿರುವ ಅನುಕೂಲ ಮತ್ತು ಅದರ ಉದ್ದೇಶಗಳನ್ನು ವಿವರಿಸಿದರು.

ಮಾಹೆ ಪಿ.ಆರ್‌. ಡೆಪ್ಯೂಟಿ ಡೈರೆಕ್ಟರ್‌ ಸಚಿನ್‌ ಕಾರಂತ, ಎಂಕಾಪ್ಸ್‌ ಅಡಿಶನಲ್‌ ಪ್ರಾಧ್ಯಾಪಕ ಡಾ| ಡಿ. ಶ್ರೀಧರ್‌, ನೊವೋ ನೊರ್‌ಡಿಸ್ಕ್ನ ಹಿರಿಯ ಯೋಜನ ನಿರ್ದೇಶಕ ಮಾದಪ್ಪ ಅಶಿಕ್‌ ಅಪ್ಪರಂದ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next