Advertisement

ಮುಷ್ಕರ ನಿರತರಿಂದ ಪಡಿತರ ಸಾಗಿಸಲು ಒಪ್ಪಿಗೆ

12:19 PM Jul 24, 2018 | |

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರ ಒಕ್ಕೂಟದಿಂದ ನಡೆಯುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾದ್ಯಂತ ಸರಕು ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ. 

Advertisement

ಮುಷ್ಕರದ ಹಿನ್ನೆಲೆಯಲ್ಲಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ದೇಶದಲ್ಲಿ ಪೆಟ್ರೋಲ್‌ ಡೀಸೆಲ್‌ ವಿಮೆ ಮತ್ತು ಟೋಲ್‌ ಪ್ಲಾಜಾಗಳ ತಪ್ಪು ನೀತಿಯಿಂದ ಸಾರಿಗೆ ಉದ್ಯಮ ಸಂಪೂರ್ಣ ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಸರ್ಕಾರದ ಈ ನೀತಿಯಿಂದಾಗಿ ಲಾರಿ ಉದ್ಯಮವನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಈ ಕುರಿತು ಹಲವು ಬಾರಿ ಆಲ್‌ ಇಂಡಿಯಾ ಮೋಟಾರ್‌ ಕಾಂಗ್ರೆಸ್‌ ವತಿಯಿಂದ ಸಂಬಂಧಪಟ್ಟ ಸಚಿವಾಲಯಗಳಿಗೆ ಮನವಿ ಪತ್ರ ನೀಡಲಾಗಿದ್ದರೂ ಈವರೆಗೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. 

ಈ ಹಿನ್ನೆಲೆಯಲ್ಲಿ ಜು.20ರಿಂದ ಅನಿವಾರ್ಯವಾಗಿ ಮುಷ್ಕರ ನಡೆಸಲಾಗುತ್ತಿದ್ದು, ಜಿಲ್ಲೆಯಲ್ಲಿ ಅಂದಾಜು 4000 ವಾಹನಗಳು ಸಾಗಾಣಿಕೆ ಕಾರ್ಯ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಿವೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಮುಷ್ಕರ ಮುಂದುವರಿಸುವುದಾಗಿ ಪ್ರತಿಭಟನಾನಿರತ ಲಾರಿ ಮಾಲೀಕರು ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಕೋದಂಡರಾಮ, ಎಂ.ಪದ್ಮಪ್ರಸಾದ್‌, ಅಬ್ದುಲ್‌ ಖಾದರ್‌, ಬಾಲಸುಬ್ರಹ್ಮಣ್ಯ, ಆರ್‌.ಸತೀಶ್‌, ಬಿ.ಎಲ್‌.ಶಂಕರ್‌, ಎಂ.ಶಶಿಕುಮಾರ್‌, ಎಲ್‌.ಶಂಕರ್‌, ಖದೀರ್‌ ಅಹ್ಮದ್‌, ಬಾಬು, ಪ್ರಕಾಶ್‌ ಮತ್ತಿತರರು ಪಾಲ್ಗೊಂಡಿದ್ದರು. 

Advertisement

ಪಡಿತರ ಸಾಗಿಸಲು ಮಾತ್ರ ಒಪ್ಪಿಗೆ: ಲಾರಿ ಮಾಲೀಕರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ಪಡಿತರ ಪದಾರ್ಥಗಳನ್ನು ಸಾಗಿಸಲು ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಶಾಸಕ ತನ್ವೀರ್‌ ಸೇs… ಮುಷ್ಕರ ನಿರತರೊಂದಿಗೆ ಸಂಧಾನ ಸಭೆ ನಡೆಸಿದರು. 

ಈ ವೇಳೆ ಸಾರ್ವಜನಿಕ ಹಿತದೃಷ್ಠಿಯಿಂದ ರೈಲ್ವೆ ಗೂಡ್ಸ್‌ ಶೆಡ್‌ನ‌ಲ್ಲಿರುವ ಪಡಿತರ ಪದಾರ್ಥವನ್ನು ಸಾಗಿಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಅದರಂತೆ ರೈಲ್ವೆ ಗೂಡ್ಸ್‌ಶೆಡ್‌ನ‌ಲ್ಲಿರುವ ಅನ್ನಭಾಗ್ಯದ ಅಕ್ಕಿ ಮತ್ತು ಮುಕ್ತ ಮಾರುಕಟ್ಟೆಯ ಗೋಧಿ ಸಾಗಿಸಲು ಲಾರಿ ಮಾಲೀಕರು ಒಪ್ಪಿಗೆ ನೀಡಿದ್ದಾರೆ.

ಸಂಧಾನ ಸಭೆಯಲ್ಲಿ ಮಾತನಾಡಿದ ಗೂಡ್ಸ್‌ಶೆಡ್‌ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್‌ ಖಾದರ್‌ ಶಾಹಿದ್‌, ಸಾರ್ವಜನಿಕ ಹಿತದೃಷ್ಟಿಯಿಂದ ರೈಲ್ವೆ ಗೂಡ್ಸ್‌ಶೆಡ್‌ನಿಂದ ಪಡಿತರ ಅಕ್ಕಿ, ಗೋಧಿ ಸಾಗಿಸಲು ಯಾವುದೇ ಅಭ್ಯಂತರವಿಲ್ಲ.

ಆದರೆ ಬನ್ನಿಮಂಟಪದ ಹಜರತ್‌ ಗುಮ್‌ನಾಮ್‌ ಶಾವಲಿ ದರ್ಗಾ ರಸ್ತೆಯಿಂದ ರಿಂಗ್‌ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ರೈಲ್ವೆ ಇಲಾಖೆ ಅಡ್ಡಲಾಗಿ ಸುರಿದಿರುವ ಮಣ್ಣನ್ನು ತೆರವುಗೊಳಿಸಿ, ರಸ್ತೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ತನ್ವೀರ್‌ ಸೇs…, ಈ ಸಂಬಂಧ ಜು.24ರಂದು ಜಿಲ್ಲಾಧಿಕಾರಿ, ರೈಲ್ವೆ ಇಲಾಖೆ ಅಧಿಕಾರಿಗಳು, ಮುಡಾ ಅಧಿಕಾರಿ, ಲಾರಿ ಸಂಘದ ಪದಾಧಿಕಾರಿಗಳೊಂದಿಗೆ ರೈಲ್ವೆ ಇಲಾಖೆ ಅಡ್ಡವಾಗಿ ಮಣ್ಣು ಸುರಿದಿರುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು.

ಬಳಿಕ ಜು.25ರಂದು ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಸಭೆ ಕರೆದು, ಸಮಸ್ಯೆ ಇತ್ಯರ್ಥಕ್ಕೆ ಕ್ರಮವಹಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next