Advertisement

‘ಅಗ್ರಸೇನಾ’ movie review: ತಂದೆ ಪ್ರೀತಿ ಮತ್ತು ಸೇಡಿನ ಜ್ವಾಲೆ

12:39 PM Jun 24, 2023 | Team Udayavani |

ಒಂದು ಕಡೆ ಅಪ್ಪನ ಮಾತು ಮೀರದೇ, ಅಪ್ಪನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಮಗ, ಇನ್ನೊಂದು ಕಡೆ ಪಕ್ಕಾ ಪರೋಡಿಯಾಗಿ ಶೋಕಿ ಜೀವನದಲ್ಲೇ ಖುಷಿ ಕಾಣುವ ಹುಡುಗ… ಈ ಎರಡೂ ವಿರುದ್ಧ ದಿಕ್ಕುಗಳು ಒಂದು ಹಂತದಲ್ಲಿ ಒಂದಾಗುತ್ತವೆ. ಅದು ಹೇಗೆ ಎಂಬ ಕುತೂಹಲ ನಿಮಗಿದ್ದರೆ ನೀವು “ಅಗ್ರಸೇನಾ’ ಚಿತ್ರ ನೋಡಬಹುದು.

Advertisement

ಈ ವಾರ ತೆರೆಕಂಡಿರುವ “ಅಗ್ರಸೇನಾ’ ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಅಲ್ಲಿಗೆ ಸಿನಿಮಾದಲ್ಲಿ ಜಬರ್ದಸ್ತ್ ಫೈಟ್‌, ಡ್ಯಾನ್ಸ್‌, ಮಾಸ್‌ ಡೈಲಾಗ್‌, ಲವ್‌.. ಎಲ್ಲವೂ ಇರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಮೊದಲೇ ಹೇಳಿದಂತೆ “ಅಗ್ರಸೇನಾ’ ಎರಡು ಟ್ರ್ಯಾಕ್‌ಗಳಲ್ಲಿ ನಡೆಯುವ ಸಿನಿಮಾ. ಒಬ್ಬ ಒಳ್ಳೆಯ ಹುಡುಗ ಹಾಗೂ ಸುಂದರ ಹಳ್ಳಿ ಮತ್ತೂಂದು ಪೊರ್ಕಿ ಹುಡುಗ ಹಾಗೂ ಕಲರ್‌ಫ‌ುಲ್‌ ಸಿಟಿ.. ಹೀಗೆ ಸಾಗುವ ಕಥೆಯಲ್ಲಿ ನಿರ್ದೇಶಕರು ಹಲವು ಟ್ವಿಸ್ಟ್‌ -ಟರ್ನ್ಗಳನ್ನು ನೀಡುವ ಮೂಲಕ ಅಲ್ಲಲ್ಲಿ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಮೊದಲರ್ಧದಲ್ಲಿ ಪಾತ್ರ ಪರಿಚಯ, ಒಂದಷ್ಟು ಕಾಮಿಡಿ, ಬಿಲ್ಡಪ್‌ಗಳ ಮೂಲಕ ಸಾಗುವ ಸಿನಿಮಾ ಇಂಟರ್‌ವಲ್‌ ನಂತರ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ಇಲ್ಲಿ ತಂದೆ ಮಗನ ಸೆಂಟಿಮೆಂಟ್‌, ಸಿಟಿಗೆ ಕಾಲಿಡದ ನಾಯಕನ ಹಿಂದಿನ ಶಪಥ, ಮತ್ತೂಬ್ಬ ನಾಯಕನ “ಕಲರ್‌ಫ‌ುಲ್‌ ಲೈಫ್’ ಹೀಗೆ ಅನೇಕ ಅಂಶಗಳ ಮೂಲಕ ಸಿನಿಮಾ ಸಾಗುತ್ತದೆ.

ಸಿನಿಮಾದ ಹೈಲೈಟ್‌ಗಳಲ್ಲಿ ಕ್ಲೈಮ್ಯಾಕ್ಸ್‌ ಕೂಡಾ ಒಂದು. ಆ ಮಟ್ಟಿಗೆ ನಿರ್ದೇಶಕರು ಒಂದಷ್ಟು ಹೊಸತನ ಮೆರೆದಿದ್ದಾರೆ. ಚಿತ್ರದಲ್ಲಿ ಅಮರ್‌ ವಿರಾಜ್‌ ಹಾಗೂ ಅಗಸ್ತ್ಯ ಬಳಗೆರೆ ನಾಯಕರು. ಇಬ್ಬರ ಪಾತ್ರ ಕೂಡಾ ಭಿನ್ನವಾಗಿದೆ. ಅಮರ್‌ ವಿರಾಜ್‌ ಕಲರ್‌ಫ‌ುಲ್‌ ಲೈಫ್ನ ಜಾಲಿಬಾಯ್‌ ಆಗಿ ಕಾಣಿಸಿಕೊಂಡರೆ, ಅಗಸ್ತ್ಯ ಬಳಗೆರೆ ಖಡಕ್‌ ಲುಕ್‌ನಲ್ಲಿ ನಟಿಸಿದ್ದಾರೆ. ಅಗಸ್ತ್ಯ ಅವರಿಗೆ ನೆಗೆಟಿವ್‌ ಶೇಡ್‌ ಪಾತ್ರಗಳಲ್ಲಿ ಭವಿಷ್ಯವಿದೆ. ಉಳಿದಂತೆ ಹಿರಿಯ ನಟ ರಾಮಕೃಷ್ಣ ಹಾಗೂ ಇತರರು ನಟಿಸಿದ್ದಾರೆ. ಚಿತ್ರದ ಹಾಡುಗಳು ಸನ್ನಿವೇಶಕ್ಕೆ ಪೂರಕವಾಗಿವೆ.

 ರವಿ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next