Advertisement

ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದ 10ನೇ ತರಗತಿ ಬಾಲಕಿಯ ಸಾವು

12:22 PM Dec 20, 2018 | udayavani editorial |

ಹೊಸದಿಲ್ಲಿ : ಬೈಕ್‌ನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳಿಬ್ಬರು ಎರಡು ದಿನಗಳ ಹಿಂದೆ ನಡು ರಸ್ತೆಯಲ್ಲಿ ತಡೆದು ನಿಲ್ಲಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ ಆಗ್ರಾ ಶಾಲೆಯ ಹತ್ತನೇ ತರಗತಿಯ15ರ ಬಾಲಕಿ ಇಲ್ಲಿನ ಸಫ್ದರ್‌ ಜಂಗ್‌ ಆಸ್ಪತ್ರೆಯಲ್ಲಿ ಇಂದು ಗುರುವಾರ ಕೊನೆಯುಸಿರೆಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈ ಬಾಲಕಿಯನ್ನು ಅಪರಿಚಿತ ದುಷ್ಕರ್ಮಿಗಳು ಯಾಕಾಗಿ ಕೊಂದರು ಎಂಬುದು ಇನ್ನೂ ಗೊತ್ತಾಗಿಲ್ಲ. ಮಾತ್ರವಲ್ಲ ಅಪರಿಚಿತ ದುಷ್ಕರ್ಮಿಗಳನ್ನು ಸೆರೆ ಹಿಡಿಯುವ ಪೊಲೀಸರ ಯತ್ನವೂ ಈ ವರೆಗೆ ಫ‌ಲ ಕಂಡಿಲ್ಲ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next