Advertisement

ಭಾರೀ ಆಲಿಕಲ್ಲು ಜಡಿ ಮಳೆ ಸಾಧ್ಯತೆ: ಆಗ್ರಾದಲ್ಲಿ 72 ತಾಸು ಕಟ್ಟೆಚ್ಚರ

05:05 PM May 04, 2018 | udayavani editorial |

ಆಗ್ರಾ : ಗುಡುಗು ಮಿಂಚು ಸಹಿತ ಜಡಿ ಮಳೆಯೊಂದಿಗೆ ಆಲೀಕಲ್ಲು ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಆಗ್ರಾವಾನ್ನು ಮುಂದಿನ 72 ತಾಸುಗಳ ಕಾಲ, ಸೋಮವಾರದ ವರೆಗೆ, ಹವಾಮಾನ ಇಲಾಖೆ ಕಟ್ಟೆಚ್ಚರದಲ್ಲಿ ಇರಿಸಿದೆ.

Advertisement

ಉತ್ತರ ಪ್ರದೇಶ ಮತ್ತು ರಾಜಸ್ಥಾನದ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆಯಿಂದ ಬೀಸಿದ್ದ ಧೂಳು ಮಿಶ್ರಿತ ಬಿರುಗಾಳಿಗೆ ಕನಿಷ್ಠ ನೂರು ಮಂದಿ ಅಸುನೀಗಿ ಇತರ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಪಾರ ನಾಶ ನಷ್ಟ ಸಂಭವಿಸಿತ್ತು. 

ಇದರ ಬೆನ್ನಿಗೇ ಈಗ ಮುಂದಿನ ಸೋಮವಾರದ ವರೆಗಿನ 72 ತಾಸುಗಳ ಕಾಲ ಜಡಿಮಳೆ, ಗುಡುಗು ಸಿಡಿಲು, ಆಲಿಕಲ್ಲು ಮಳೆ ಉಂಟಾಗುವ ಸಾಧ್ಯತೆ ಇರುವ ಕಾರಣ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗೌರವ್‌ ದಯಾಳ್‌ ಅವರು ವಿಸ್ತೃತ ಸಲಹೆ ಸೂಚನೆಗಳನ್ನು ಜಿಲ್ಲಾಡಳಿತೆಗೆ ಇಂದು ಜಾರಿಗೊಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next