Advertisement
ಎಲ್ಲ ಮೂರು ಸೇನಾ ಮುಖ್ಯಸ್ಥರು ವೇದಿಕೆಯನ್ನು ಹಂಚಿ ಕೊಂಡಿದ್ದ ಗೌರವಾನ್ವಿತ ರಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು. ಇದಕ್ಕೆ ಸಮಾಜದ ವಿವಿಧ ವರ್ಗದ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ಹಾಗೆಯೇ ಹಲವಾರು ಸಾಧಕ ಬಾಧಕಗಳನ್ನು ಎತ್ತಿ ತೋರಿಸಿ ವಿವಿಧ ರೀತಿಯ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.
Related Articles
Advertisement
ಅಲ್ಪಾವಧಿ ನೇಮಕಾತಿ ಆಕಾಂಕ್ಷಿಗಳಿಗೆ ಮತ್ತು ನಾಲ್ಕು ವರ್ಷಗಳ ಅವಧಿಯ ಅನಂತರ ಸೇವೆ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಹಿಂದಿನ ವ್ಯವಸ್ಥೆಯಲ್ಲಿ ಅಂತಹ ಯಾವುದೇ ಆಯ್ಕೆ ಲಭ್ಯವಿರಲಿಲ್ಲ. ಇದರ ಪರಿಣಾಮವಾಗಿ ಒಂದು ಕಡೆ ಯುವಕರ ಒಂದು ವರ್ಗ ಕನಿಷ್ಠ 15-20 ವರ್ಷಗಳ ಬಾಧ್ಯತೆಯ ಕಾರಣದಿಂದಾಗಿ ಸೇನೆಗೆ ಸೇರುವ ಆಯ್ಕೆಯನ್ನು ಮಾಡಲು ಹಿಂಜರಿಯುತ್ತಿತ್ತು ಮತ್ತು ಮತ್ತೂಂದೆಡೆ, ಸೇನೆಯು ಉದಯೋನ್ಮುಖ ತಂತ್ರ ಜ್ಞಾನ ಗಳಲ್ಲಿ ಹಿರಿಯರಿಗೆ / ವರಿಷ್ಠರಿಗೆ ಮರು – ಕೌಶಲದ ತರಬೇತಿ ನೀಡುವಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಯುವಕರನ್ನು ಆಗಾಗ್ಗೆ ಸೇರಿಸಿಕೊಳ್ಳುವುದು ಮತ್ತು ಯೋಧರ ಸರಾಸರಿ ವಯಸ್ಸಿನ ಕಡಿತವು ರಕ್ಷಣ ಪಡೆಗಳಿಗೆ ಉತ್ತಮ ವಾಗಿರುತ್ತದೆ. ಭಾರತೀಯ ವಾಯು ಪಡೆಯಲ್ಲಿ ಸಾಮಾನ್ಯ ವಾಗಿ ಏರ್ ವಾರಿಯರ್ಸ್ ಎಂದು ಕರೆಯಲ್ಪಡುವ ಯೋಧರ ಸರಾಸರಿ ವಯಸ್ಸಿನ ಕಡಿತವು ರಕ್ಷಣ ಪಡೆಗಳಿಗೆ ಪ್ರಮುಖ ಪ್ರಯೋಜನವಾಗಿದೆ. ವಾಸ್ತವವಾಗಿ, ಅಸ್ತಿತ್ವದಲ್ಲಿರುವ ವ್ಯವಸ್ಥೆಗೆ ಹೋಲಿಸಿದರೆ ತರಬೇತಿ ಅವಧಿ, ಮಾದರಿಗಳು ಮತ್ತು ಅಗ್ನಿವೀರರ ವಿವರಗಳನ್ನು ಪರಿಷ್ಕರಿಸುವ ಆವಶ್ಯಕತೆಯಿದೆ.
ರಕ್ಷಣ ಪಡೆಗಳು ರಾಷ್ಟ್ರೀಯ ರಕ್ಷಣೆಯ ಕಟ್ಟಕಡೆಯ ಭದ್ರಕೋಟೆಗಳಾಗಿವೆ ಮತ್ತು ಸೇವಾ ಮುಖ್ಯಸ್ಥರ ದೂರದೃಷ್ಟಿ ಮತ್ತು ಯೋಜನೆಯ ಬಗ್ಗೆ ಯಾರಿಗೂ ಯಾವುದೇ ಸಂದೇಹವಿರಕೂಡದು. ರಕ್ಷಣ ಪಡೆಗಳು, ಈಗ, ತರಬೇತಿ ಮಾದರಿಗಳು ಮತ್ತು ಕಾರ್ಯಾಚರಣೆಯ ಬಳಕೆ ಸೇರಿದಂತೆ ಹೊಸ ಯೋಜನೆಯ ಎಲ್ಲ ಆಯಾಮಗಳ ಬಗ್ಗೆ ಚರ್ಚಿಸಿ ರಬೇಕು. ಯಾವುದೇ ಮಟ್ಟದಲ್ಲಿ ದುರ್ಬಲವಾಗಿರುವಂತೆ ಮಾಡುವುದಿಲ್ಲ. ಭಾರತದ ಎಲ್ಲ ನಾಗರಿಕರು ಅವರಿಗೆ ಅಗತ್ಯವಿ¨ªಾಗ ರಕ್ಷಣ ಪಡೆಗಳು ತಮ್ಮನ್ನು ತಾವು ಪ್ರತಿ ಬಾರಿಯೂ ಮತ್ತು ಪ್ರತೀ ಅಂಶದಲ್ಲೂ ತಾವೇನೆಂಬುದನ್ನು ಸಾಬೀತುಪಡಿಸುತ್ತವೆ ಎನ್ನುವ ಭರವಸೆ ಹೊಂದಿರಬೇಕು.
ಇದರ ಪ್ರಾಥಮಿಕ ಪಾಲುದಾರರು ದೇಶದ ಯುವಕರು. ಯುವಕರ ಆಕಾಂಕ್ಷೆಗಳು ಹಾಗೂ ಆಸಕ್ತಿಗಳನ್ನು ಪರಿಗಣಿ ಸೋಣ. 10ನೇ ಅಥವಾ 12ನೇ ತರಗತಿಯಲ್ಲಿ ತೇರ್ಗಡೆಯಾದ ಯುವಕರಿಗೆ ಉತ್ತಮ ಕಾರ್ಪೊರೇಟ್ ಕಂಪೆನಿಗಳು ನೀಡುವ ಆರ್ಥಿಕ ಪ್ಯಾಕೇಜ್‌ಗಿಂತ ಸರಕಾರವು ಘೋಷಿಸಿದ ಆರ್ಥಿಕ ಪ್ಯಾಕೇಜ್ ಹೆಚ್ಚಾಗಿದೆ. ಹೊಸದಾಗಿ ನೇಮಕಗೊಂಡವರಿಗೆ ತಿಂಗಳಿಗೆ 30,000 ರೂ. ಮತ್ತು ಹೆಚ್ಚುವರಿಯಾಗಿ ರೂ. 9000 ವನ್ನು ಅವರ ಸೇವಾ ನಿಧಿಗೆ ಸರಕಾರವು ಪ್ರತೀ ತಿಂಗಳು ಕೊಡುಗೆ ನೀಡುತ್ತದೆ. ಹೆಚ್ಚುವರಿಯಾಗಿ ಪ್ರತೀ ವರ್ಷ, ಸಂಬಳದಲ್ಲಿ ಸುಮಾರು ಶೇ. 10ರಷ್ಟು ಏರಿಕೆಯಾಗುತ್ತಿತ್ತು. ವಸತಿ, ವೈದ್ಯಕೀಯ ಸೌಲಭ್ಯಗಳು ಇತ್ಯಾದಿಗಳನ್ನು ಒಳಗೊಂ ಡಂತೆ ದಿನನಿತ್ಯದ ಹೆಚ್ಚಿನ ಆವಶ್ಯಕತೆಗಳನ್ನು ರಕ್ಷಣ ಪಡೆಗಳಿಂದ ನೋಡಿಕೊಳ್ಳಲಾಗುತ್ತದೆ ಆದ್ದರಿಂದ ಅಗ್ನಿವೀರ ಇವುಗಳಿಗೆ ಯಾವುದೇ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಆದಾಯದ ಅತ್ಯಂತ ಕಡಿಮೆ ಭಾಗವು ದೈನಂದಿನ ವೆಚ್ಚಕ್ಕೆ ಖರ್ಚಾಗುವುದರಿಂದ, ಸಂಬಳದ ಹೆಚ್ಚಿನ ಭಾಗವನ್ನು ಉಳಿಸಬಹುದು. ಇದಲ್ಲದೆ ನಾಲ್ಕು ವರ್ಷಗಳು ಪೂರ್ಣಗೊಂಡ ಅನಂತರ ಸೇವಾ ನಿಧಿ ಖಾತೆಯ ಅವಧಿ ಮುಗಿಯುತ್ತಿದ್ದಂತೆ ಪ್ರತಿ ಅಗ್ನಿವೀರನಿಗೆ 11 ಲಕ್ಷ ರೂ. ಸಿಗುತ್ತದೆ.
ಹಣಕಾಸಿನ ಪ್ರಯೋಜನಗಳ ಜತೆಗೆ ಈ ಯೋಜನೆಯು ಯುವಜನರ ಇತರ ಆಕಾಂಕ್ಷೆಗಳನ್ನು ಪೂರೈಸುತ್ತದೆ, ಇದರಲ್ಲಿ ಹೆಮ್ಮೆ, ಸ್ವಾಭಿಮಾನ, ಕೌಶಲಗಳ ಉನ್ನತೀಕರಣ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳು ಸೇರಿವೆ. ಶಿಕ್ಷಣ ಸಚಿವಾಲಯವು ಈಗಾಗಲೇ ಹೊರ ತಂದಿರುವಂತೆ, ಯುಜಿಸಿ ಮತ್ತು ಇಗ್ನೊ (IGNOU) ಗಳು ರಾಷ್ಟ್ರೀಯ ಶಿಕ್ಷಣ ನೀತಿ 2020ರ ನಿಬಂಧನೆಗಳನ್ನು ಗರಿಷ್ಠ ಗೊಳಿಸಲು ಅಗ್ನಿವೀರರಿಗೆ ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಉನ್ನತೀಕರಿಸಲು ಕಾರ್ಯವಿಧಾನ ಮತ್ತು ಆಯ್ಕೆಗಳನ್ನು ರೂಪಿಸುತ್ತವೆ. ಇದು ಖಾಯಂ ಸೇವೆಗಳಿಗೆ ನೇಮಕವಾಗದ ವರಿಗೆ ಮತ್ತೂಂದು ಉದ್ಯೋಗಾವಕಾಶವನ್ನು ಸುಗಮಗೊಳಿ ಸುತ್ತದೆ. ಗೃಹ ಸಚಿವಾಲಯವು ಈಗಾಗಲೇ ಈ ಯುವ ಮತ್ತು ನುರಿತ ನಾಗರಿಕರನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ನೇಮಿಸಿ ಕೊಳ್ಳುವ ಯೋಜನೆಯನ್ನು ಹೊರತರುವ ಪ್ರಕ್ರಿಯೆ ಯಲ್ಲಿದೆ. ಅವರು ಸರಕಾರಿ ವಲಯ, ಉದ್ಯಮ, ಐಟಿ ವಲಯ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ಯೋಗ್ಯವಾದ ಉದ್ಯೋಗವನ್ನು ಹುಡುಕುವ ಅಥವಾ ಅವರ ಸೇವಾ ನಿಧಿಯನ್ನು ಬಳಸಿಕೊಂಡು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವ ಆಯ್ಕೆಗಳನ್ನು ಹೊಂದಿರುತ್ತಾರೆ.
ಕೊನೆಯದಾಗಿ ಅಗ್ನಿಪಥ ಯೋಜನೆಯು ರಾಷ್ಟ್ರ ನಿರ್ಮಾಣಕ್ಕೆ ಅದ್ಭುತವಾದ ಅಮೂರ್ತ ಕೊಡುಗೆಯನ್ನು ನೀಡುತ್ತದೆ. ಯುವ ಮತ್ತು ಪ್ರಭಾವಶಾಲಿ ಮನಸ್ಸಿನಲ್ಲಿ ಶಿಸ್ತು, ಪ್ರಾಮಾಣಿಕತೆ, ಉತ್ಸಾಹ, ಸಾಂ ಕ ಉತ್ಸಾಹ, “ತನಗಿಂತ ಸೇವೆ ಮಿಗಿಲು, ದೇಶ ಮೊದಲು’ ಎನ್ನುವ ಮನೋಭಾವದ ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ರಾಷ್ಟ್ರ ನಿರ್ಮಾಣ ಕಾಯಕಕ್ಕೆ ಹಲವು ರೀತಿಯಲ್ಲಿ ಮಹತ್ವದ ಕೊಡುಗೆ ನೀಡುತ್ತದೆ.
ನನ್ನ ಅಭಿಪ್ರಾಯದಲ್ಲಿ, ಈ ಯೋಜನೆಯು ರಾಷ್ಟ್ರದ ರಕ್ಷಣ ಪಡೆಗಳಿಗೆ ಮತ್ತು ಯುವವರ್ಗಕ್ಕೆ ಎರಡಕ್ಕೂ ಅನುಕೂಲವಾಗಿದೆ ಮತ್ತು ಉನ್ನತ ಮಟ್ಟದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಅದರ ಕೊಡುಗೆ ಅದ್ಭುತವಾಗಿರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.
– ನಿ| ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ , ಭಾರತೀಯ ವಾಯುಪಡೆಯ ನಿಕಟಪೂರ್ವ ಮುಖ್ಯಸ್ಥ