Advertisement

ಶರವು ದೇಗುಲದಲ್ಲಿ ಅಂಗಾರಕ ಸಂಕಷ್ಟಿ

10:45 AM Apr 04, 2018 | |

ಮಹಾನಗರ: ಶರವು ಶ್ರೀ ಮಹಾಗಣಪತಿ ದೇವಾಲಯದಲ್ಲಿ ಸಂಭ್ರಮದ ಅಂಗಾರಕ ಸಂಕಷ್ಟಿ ವ್ರತಾಚರಣೆ ಮಂಗಳವಾರ ನಡೆಯಿತು. ಬೆಳಗ್ಗೆ 7 ಗಂಟೆಯಿಂದಲೇ ದೇಗುಲಕ್ಕೆ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಸುಮಾರು 5,000ಕ್ಕೂ ಅಧಿಕ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ದೇವರಿಗೆ ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಪತಿ ಹೋಮ, ಅಪ್ಪದ ಪೂಜೆ ಸೇವೆ ಸಲ್ಲಿಸಿದರು.

Advertisement

ಶರವು ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಮತ್ತು ಸುದೇಶ್‌ ಶಾಸ್ತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 11.30ರಿಂದ ಮಹಾಗಣಯಾಗ ಪೂರ್ಣಾಹುತಿ, 12ಕ್ಕೆ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆಯಿತು.

ಎಸ್‌. ರಾಹುಲ್‌ ಶಾಸ್ತ್ರಿ, ಪ್ರಶಾಂತ್‌ ಆಚಾರ್‌, ವಿಟ್ಠಲ್‌ ಭಟ್‌, ಗಣೇಶ್‌ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾಪೂಜೆ ನೆರವೇರಿತು. ಅಂಗಾರಕ ಸಂಭ್ರಮದಲ್ಲಿ ಶರವು ದೇಗುಲವನ್ನು ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅಲಂಕಾರಕ್ಕೆ ತೋರಣ, ಸೀಯಾಳ, ಹೂವುಗಳ ಬಳಕೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next