Advertisement

ಶಶಿಧರ್‌ ವಿರುದ್ಧ ಮತ್ತೆ ವಿಚಾರಣೆ

06:55 AM Apr 02, 2018 | Team Udayavani |

ಬೆಂಗಳೂರು: ಪೊಲೀಸ್‌ ವ್ಯವಸ್ಥೆಗಳ ಬಗ್ಗೆ ಟೀಕೆ ಮಾಡುತ್ತಾ ಸಿಬ್ಬಂದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟನೆಗೆ ಪ್ರಚೋದಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಪೊಲೀಸ್‌ ಮಹಾಸಂಘದ ಅಧ್ಯಕ್ಷ ಶಶಿಧರ್‌ ವೇಣುಗೋಪಾಲ್‌ ಹಾಗೂ ಇತರೆ 5 ಮಂದಿ ವಿರುದ್ಧ ವಿಚಾರಣೆ ಮುಂದುವರಿಸುವಂತೆ ಗೃಹ ಇಲಾಖೆ ಆದೇಶಿಸಿದೆ.

Advertisement

ಪೊಲೀಸ್‌ ಮಹಾಸಂಘದ ಅಧ್ಯಕ್ಷ ಶಶಿಧರ್‌ ಹಾಗೂ ಬಸವರಾಜ್‌, ಗುರುಪಾದಯ್ಯ  ಸಿಆರ್‌ಪಿಸಿ ಅಡಿ ಹಾಗೂ ಕರ್ತವ್ಯದಲ್ಲಿದ್ದುಕೊಂಡು ಇಲಾಖೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಪೇದೆಗಳಾದ ಮಂಜುನಾಥ್‌, ಧನಂಜಯ್‌, ಶಿವಪ್ಪ ಪೊಲೀಸ್‌ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ  ಅನುಮತಿ ನೀಡಿದೆ.

ಇದೇ ವೇಳೆ  ಪ್ರಕರಣದ 7ನೇ ಆರೋಪಿಯಾಗಿರುವ ನಿವೃತ್ತ ಪೊಲೀಸ್‌ ಮಹಾನಿರ್ದೇಶಕರ ವಿರುದ್ಧ ಇಲಾಖಾ ತನಿಖೆ ಮುಂದುವರಿಸುವ ಕುರಿತು ಪರಿಶೀಲನೆಯಲ್ಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಶಿಧರ್‌, ಬಸವರಾಜ್‌, ಗುರುಪಾದಯ್ಯ ಪೊಲೀಸ್‌ ವ್ಯವಸ್ಥೆ ವಿರುದ್ಧ ಸಂಘಟನೆ ಕಟ್ಟಿಕೊಂಡು 2016ರಲ್ಲಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲ ಪೇದೆಗಳನ್ನು ಪ್ರಚೋದನೆ ಮಾಡಿ ಪ್ರತಿಭಟನೆಗೆ ಮುಂದಾಗಿದಲ್ಲದೆ, ಇಲಾಖೆಯಲ್ಲಿ ಅಶಿಸ್ತು ಸೃಷ್ಠಿಸಿದ್ದರು ಎಂಬ ಆರೋಪದಡಿ ಯಲಹಂಕ ನ್ಯೂಟೌನ್‌ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಅನಂತರ ಪ್ರಕರಣವನ್ನು ಸಿಸಿಬಿಗೆ ವರ್ಗಾಹಿಸಲಾಗಿತ್ತು. ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿ ಶಿಕ್ಷೆಗೆ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next