Advertisement
ಮೇ 2 ರಂದು ನವಲಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ, ಪ್ರಹ್ಲಾದ ಜೋಶಿ ವಿರುದ್ದ ಭಾಷಣ ಮಾಡಿದ್ದರು. ಈ ಭಾಷಣದಲ್ಲಿನ ಹೇಳಿಕೆ ಆಧಾರಿಸಿ ಜಾತಿ, ಸಮುದಾಯ, ಧರ್ಮದ ಹೆಸರಿನಲ್ಲಿ ವಿಭಿನ್ನ ವರ್ಗಗಳ ನಾಗರಿಕರ ನಡುವೆ ವೈರತ್ವ ಮತ್ತು ದ್ವೇಷ ಭಾವನೆ ಉಂಟು ಮಾಡುವ ಹೇಳಿಕೆ ನೀಡಿದ ಅಪರಾಧದ ಆರೋಪದಡಿ ಶ್ರೀಗಳ ವಿರುದ್ದ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಮಾವೇಶದಲ್ಲಿದ್ದ ಚುನಾವಣಾ ಅಽಕಾರಿ ಆರ್.ಕುಮಾರಸ್ವಾಮಿ ಅವರಿಂದ ಈ ದೂರು ಸಲ್ಲಿಸಲಾಗಿದೆ.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ತಮ್ಮ ಜಾತಿ ಅವರನ್ನು ಪ್ರೀತಿ ಮಾಡಿದಷ್ಟು ಬೇರೆ ಯಾವ ಜಾತಿ ಅವರನ್ನು ಮಾಡಿಲ್ಲ. ನಿಮ್ಮ ಲಿಂಗಾಯತ ಜಾತಿ ಒಳಗ ಯಾರೂ ಇಲ್ಲ ಏನರೀ ನಿಮ್ಮ ಅವರಿಗೆ ಪೋನ್ ಮಾಡಿ ಕೊಡ್ರಿ ನಮಗೆ ಪೋನ್ ಮಾಡಬ್ಯಾಡಿ ಅಂತ ಹೇಳುವ ಈ ಪಾಪಿಯನ್ನು ಹೊರಗ ಹಾಕುವರೆಗೂ ಸಮಾಧಾನ ಇಲ್ಲ, ಮೊದಲು ಎಲ್ಲ ಜಾತಿ ಅವರು ಭಸ್ಮ ಹಚ್ಚುಗೊಳ್ಳುತ್ತಿದ್ದರು. ಭಸ್ಮ ಹೋಗಿ ಕುಂಕುಮ ಬಂದರೂ ಸುಮ್ಮ ಇದೀವಿ, ಭಂಡಾರ ಹೋಗಿ ಕುಂಕುಮ ಬಂದರೂ ಸುಮ್ಮನೆ ಇದೀವಿ. ನಮಸ್ಕಾರ, ಶರಣು ಶರಣಾರ್ಥಿ ಹೋಗಿ ಹರಿ ಓಂ, ಜೈ ಶ್ರೀರಾಮ್ ಪೋನ್‌ನಲ್ಲಿ ಬಂದರೂ ಸುಮ್ಮನೆ ಇದೀವಿ. ಏನೇನೆಲ್ಲಾ ನೋಡಿ ಸುಮ್ಮನೆ ಇದ್ದರೂ ಕೂಡ ಯಾವ ಸ್ಥಾನಕ್ಕೆ ಬಂದಿದೆ ಅಂದರೆ ನಾವು ಬದುಕೇನೂ ಉಪಯೋಗವಿಲ್ಲ. ಈ ನಾಡಿನೊಳಗೆ ಈ ಸಮಾಜದೊಳಗೆ ಹುಟ್ಟಿ ಉಪಯೋಗವಿಲ್ಲದಂತಹ ಕೆಟ್ಟ ಪರಿಸ್ಥಿತಿ ಬಂದ ಮೇಲೆ ಇವತ್ತಿನ ದಿವಸ ಅನಿವಾರ್ಯವಾಗಿ ಹೊರಗೆ ಬಂದೀವಿ.. ಹೀಗೆ ಸ್ವಾಮೀಜಿ ನೀಡಿದ ವಿವಿಧ ಹೇಳಿಕೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳಿದ್ದು, ಇದು ಸೇರಿ ನಾಲ್ಕು ದೂರು ದಾಖಲಾದಂತಾಗಿದೆ.